Latest

ಬೆಟ್ಟಿಂಗ್ ಭೂತ; ಸಾಲ ತೀರಿಸಲಾಗದೇ ಘಟಪ್ರಭಾ ನದಿಗೆ ಹಾರಿದ ವ್ಯಾಪಾರಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕ್ರಿಕೆಟ್ ಬೆಟ್ಟಿಂಗ್ ಗಾಗಿ ಸಾಲಮಾಡಿ, ಸಾಲ ತೀರಿಸಲಾಗದೇ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳಲು ಘಟಪ್ರಭಾ ನದಿಗೆ ಹಾರಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಕ್ರಿಕೆಟ್ ಬೆಟ್ಟಿಂಗ್ ಸುಳಿಗೆ ಸಿಲುಕಿದ್ದ 38 ವರ್ಷದ ಹಣ್ಣಿನ ವ್ಯಾಪಾರಿ ಸೈಯದ್ ವಾಳದ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಇದೀಗ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಾರಿದ್ದಾರೆ.

ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರಿಂದ ಸೋಧ ಕಾರ್ಯ ಆರಂಭವಾಗಿದೆ.
ಕೋಡಿಹಳ್ಳಿ ವಿರುದ್ಧ ಭ್ರಷ್ಟಾಚಾರ ಆರೋಪ; ರೈತ ಸಂಘದ ರಾಜ್ಯಾಧ್ಯಕ್ಷನ ವಿರುದ್ಧ ತಿರುಗಿಬಿದ್ದ ರೈತ ಮುಖಂಡರು

Related Articles

Back to top button