Kannada NewsKarnataka NewsLatest
ಹಾವು ಕಡಿತಕ್ಕೆ ಬಲಿಯಾದ ರೈತನ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾವು ಕಡಿತದಿಂದ ಮೃತಪಟ್ಟಿದ್ದ ರೈತನ ಕುಟುಂಬಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪರಿಹಾರದ ಚೆಕ್ ವಿತರಿಸಿದರು.
ಸುಳಗಾ (ಯು) ಗ್ರಾಮದ ಯಲ್ಲಪ್ಪ ನರೋಟಿ ಎಂಬ ರೈತ ತನ್ನ ಹೊಲದ ಕೆಲಸದಲ್ಲಿ ನಿರತನಾದ ಸಮಯದಲ್ಲಿ ಹಾವು ಕಡಿತದಿಂದ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಇವತ್ತು ಮೃತ ರೈತನ ಪತ್ನಿಗೆ ಸರಕಾರದಿಂದ ಎರಡು ಲಕ್ಷ ರೂ. ಗಳನ್ನು ಬಿಡುಗೊಡೆಗೊಳಿಸಿ, ಅವರಿಗೆ ಲಕ್ಷ್ಮೀ ಹೆಬ್ಬಾಳಕರ ಚೆಕ್ ಹಸ್ತಾಂತರಿಸಿದರು.
ಈ ವೇಳೆ ನರೋಟಿ ಕುಟುಂಬದವರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ