Kannada NewsKarnataka NewsLatest

*ದೀರ್ಘದಂಡ ನಮಸ್ಕಾರ ಮಾಡುತ್ತಿದ್ದ ಯುವತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀರ್ಘದಂಡ ನಮಸ್ಕಾರ ಮಾಡುವಾಗ ದುರಂತ ಸಂಭವಿಸಿದ್ದು, ಯುವತಿಯ ಮೇಲೆ ಕಾರು ಹರಿದು ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಐಶ್ವರ್ಯ ನಾಯಕ್ ಮೃತ ಯುವತಿ. ಗ್ರಾಮದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ದೇವಸ್ಥಾನದವರೆಗೆ ದೀರ್ಘದಂದ ನಮಸ್ಕಾರ ಸಲ್ಲಿಸುವ ಸಂದರ್ಭದಲ್ಲಿ ಯುವತಿಯ ತಲೆ ಮೇಲೆ ಕಾರಿನ ಚಕ್ರ ಹರಿದಿದೆ. ಯುವತಿ ಸ್ಥಳದಲೇ ಸಾವನ್ನಪ್ಪಿದ್ದಾಳೆ.

Home add -Advt

ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button