Kannada NewsLatest

ಬೂತ್ ಮಟ್ಟದಲ್ಲಿ‌ ಪಕ್ಷವನ್ನು ಸಂಘಟಿಸಿದಲ್ಲಿ ಮಾತ್ರ ಪಕ್ಷ ಗಟ್ಟಿಯಾಗುತ್ತದೆ: ಡಾ.ರಾಜೇಶ ನೇರ್ಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೂತ್ ಅಧ್ಯಕ್ಷ ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಜವಾಬ್ದಾರಿ ಬಹು‌‌ ಮುಖ್ಯವಾಗಿದ್ದು, ಈ ಇಬ್ಬರೂ ಕೂಡ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಹೇಳಿದರು.

ಚಿಕ್ಕೋಡಿ, ಸದಲಗಾ ಮಂಡಲದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನವಲಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಪಟ್ಟಣಕುಡಿ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೂತ್ ಅಧ್ಯಕ್ಷರು ನಿರಂತರವಾಗಿ ಮತದಾರರನ್ನು ಸಂಪರ್ಕದಲ್ಲಿ ಇಟ್ಟುಕೊಂಡು ಬೂತ್ ಮಟ್ಟದಲ್ಲಿ‌ ಪಕ್ಷವನ್ನು ಸಂಘಟಿಸಿದಲ್ಲಿ ಮಾತ್ರ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗುತ್ತದೆ ಎಂದರು.

Home add -Advt

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂಜೀವ ಪಾಟೀಲ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವಥಪುರ, ಮಂಡಲ ಪ್ರಧಾನ ಕಾರ್ಯದರ್ಶಿ ಪವನ ಮಹಾಜನ, ಮಹಿಳಾ ಮೋರ್ಚಾ ಮಂಡಲ‌ ಅಧ್ಯಕ್ಷೆ ಶಕುಂತಲಾ ಡೋಣವಾಡೆ, ಹಿರಿಯ ಕಾರ್ಯಕರ್ತರಾದ ಮಗದುಮ ಕಾಕಾ ಮತ್ತು ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button