Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಜನತೆಯಲ್ಲಿ ಮನವಿ*

ಜಲಾಶಯಗಳಲ್ಲಿ ನೀರಿನ ಪ್ರಮಾಣ ಕೊರತೆ; ಮಿತವಾಗಿ ನೀರು ಬಳಸಲು ಸೂಚನೆ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನೀರು ಅಮೃತ ಸಮಾನ ಸಂಪನ್ಮೂಲ. ಅಗತ್ಯಕ್ಕೆ ಅನುಗುಣವಾಗಿ ಮಿತವಾಗಿ ನೀರನ್ನು ಬಳಕೆ ಮಾಡುವ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ. ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಹಿಡಕಲ್ ಜಲಾಶಯ ಹಾಗೂ ರಕ್ಕಸಕೊಪ್ಪದಲ್ಲಿ ನೀರಿನ ಸಂಗ್ರಹದ ಪ್ರಮಾಣ ಮಳೆ ಇಲ್ಲದೆ ಕೊರತೆಯಾಗಿರುವುದರಿಂದ ದಿನನಿತ್ಯದ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸುವಂತೆ ಕೆಯುಐಡಿಎಫ್‌ಸಿ ಮನವಿ ಮಾಡಿದೆ.

Home add -Advt

ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೇಸಿಗೆ ಕಾಲದಲ್ಲಿ ನೀರನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ತೊಂದರೆಯಾಗಬಹುದಾಗಿದೆ. ಕಾರಣ ಸಾರ್ವಜನಿಕರು ಈಗಿನಿಂದಲೇ ಮಿತವಾಗಿ ನೀರನ್ನು ಬಳಸಬೇಕು, ನೀರನ್ನು ಪೋಲು ಮಾಡಬಾರದು.

ಬರುವ ಬೇಸಿಗೆಯನ್ನು ಎದುರಿಸಲು ಮಹಾನಗರ ಪಾಲಿಕಗೆ ಸಹಕರಿಸಿ ಎಂದು ಮಹಾನಗರ ಪಾಲಿಕೆಯ ಪರವಾಗಿ ಕೆಯುಐಡಿಎಫ್‌ಸಿ ಮನವಿ ಮಾಡಿದೆ.


Related Articles

Back to top button