*ಬೆಳಗಾವಿಗೆ 100 ಬೆಡ್ ESIC ಆಸ್ಪತ್ರೆ ಮಂಜೂರು; ಅಧಿಕಾರಿಗಳೊಂದಿಗೆ ಸಂಸದ ಈರಣ್ಣ ಕಡಾಡಿ ಚರ್ಚೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರ ಬೆಳಗಾವಿ ಜಿಲ್ಲೆಗೆ 100 ಬೆಡ್ ಇ.ಎಸ್.ಐ.ಸಿ (ಇSIಅ) ಆಸ್ಪತ್ರೆ ಮಂಜೂರು ಮಾಡಿದ್ದು, ಆಸ್ಪತ್ರೆ ಕಟ್ಟಡದ ಸ್ಥಳ ಆಯ್ಕೆ ಮಾಡುವುದು ಹಾಗೂ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡುವ ಕುರಿತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅಧಿಕರಿಗಳ ಜೊತೆಸಭೆ ನಡೆಸಿದರು.
ಬೆಂಗಳೂರಿನಲ್ಲಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಾದ ಇ.ಎಸ್.ಐ.ಸಿ ಪ್ರಾದೇಶಿಕ ನಿರ್ದೇಶಕ ರೇಣುಕಾ ಪ್ರಸಾದ, ಇ.ಎಸ್.ಐ.ಎಸ್ ರಾಜ್ಯ ವಲಯ ನಿರ್ದೇಶಕ ವರದರಾಜು ಹಾಗೂ ಕಾರ್ಯನಿರ್ವಾಹಕ ಅಭಿಯಂತರಾದ ವಿನೋದ ಕಾತವಾರ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಇದೇ ವೇಳೆ ಸಂಸದ ಈರಣ್ಣ ಕಡಾಡಿ ಅವರು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರನ್ನು ಬೆಂಗಳೂರಿನ ಗೃಹ ಕಛೇರಿಯಲ್ಲಿ ಭೇಟಿಯಾಗಿ ಕಲ್ಲೋಳಿ ಪಟ್ಟಣದಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆಗಾಗಿ ತಾತ್ಕಾಲಿಕ ಕಟ್ಟಡವನ್ನು ಒದಗಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ