ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು ಮೂವರು ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರೋಗಿಗಳ ಸಾವಿನ ಹೊಣೆಗಾರಿಕೆ ಹೋರಲು ಸಿದ್ಧ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಳ್ಳಾರಿ ವಿಮ್ಸ್ ದುರಂತ ಪ್ರಕರಣಕ್ಕೆ ಆರೋಗ್ಯ ಸಚಿವರೇ ನೇರ ಹೊಣೆ. ಸಚಿವರ ಬೇಜವಬ್ದಾರಿಯಿಂದಲೇ ದುರಂತ ಸಂಭವಿಸಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪದಿಂದ ನೋವಾಗಿದೆ. ಒಬ್ಬ ನಾಯಕನಾಗಿ ಆಡುವ ಮಾತು ಇದಲ್ಲ. ಅವರು ಕುದ ಹಿಂದೆ ಸರ್ಕಾರ ನಡೆಸಿದಂತವರು ಎಂದು ಹೆಳಿದರು.
ರೋಗಿಗಳ ಸಾವು ದುರದೃಷ್ಟಕರ. ಸಾವು ಸಾವೇ ಅದರ ಹೊಣೆಗಾರಿಕೆಯನ್ನು ತೆರೆದುಕೊಳ್ಳುತ್ತೇನೆ. ಪ್ರಕರಣ ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚಿಸಿದ್ದೇನೆ. ಮೃತರ ಕುಟುಬಕ್ಕೆ ಮುಖ್ಯಮಂತ್ರಿಗಳು 5 ಲಕ್ಷ ಪರಿಹಾರ ಘೋಷಿದ್ದಾರೆ. ಆದರೂ ಕೂಡ ಸಿದ್ದರಾಮಯ್ಯನವರು ಆರೋಪ ಮಾಡುತ್ತಲೇ ಇರುವುದು ಸರಿಯಲ್ಲ ಎಂದರು.
2017ರಲ್ಲಿ ಸಿದ್ದರಾಮಯ್ಯನವರು ಕೆಪಿಎಂಇ ಕಾಯ್ದೆ ತರಲು ಹೋಗಿದ್ದರು. 3 ದಿನ ಡಿಸ್ಪೆನ್ಸರಿ ಬಂದ್ ಮಾಡಿದ್ದಾಗ 70-80 ಜನರ ಸಾವಾಗಿತ್ತು. ಹಾಗಾದರೆ ಇದಕ್ಕೆ ಸಿದ್ದರಾಮಯ್ಯನವರೇ ನೇರ ಹೊಣೆ ಎಂದು ನಾನೂ ಹೇಳಬಹುದಾ? ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.
ವಿಮ್ಸ್ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್
https://pragati.taskdun.com/latest/bellary-vims-tragidybig-twistdr-gangadhar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ