Film & Entertainment

*ಶಿರಸಿಯಲ್ಲಿ ನಟ ಶಿವರಾಜ್ ಕುಮಾರ್*

ಪ್ರಗತಿವಾಹಿನಿ ಸುದ್ದಿ: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವೇಳೆ ನಟ ಶಿವರಾಜ್ ಕುಮಾರ್ ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿದ್ದು, ಅಭಿಮಾನಿಗಳೊಂದಿಗೆ ಥಿಯೇಟರ್ ಗೆ ತೆರಳಿ ಸಿನಿಮಾ ವೀಕ್ಷಿಸಿದರು.

Home add -Advt

ಶಾಸಕ ಭೀಮಣ್ಣ ನಾಯ್ಕ್ ಪುತ್ರ ಅಶ್ವಿನ್ ಜನ್ಮ ದಿನದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ದಂಪತಿ ಶಿರಸಿಗೆ ಆಗಮಿಸಿ ಅವರಿಗೆ ಶುಭ ಕೋರಿದರು. ಇದೇ ವೇಳೆ ಶಿರಸಿಯ ನಟರಾಜ ಥಿಯೇಟರ್ ಗೆ ಆಗಮಿಸಿದ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ, ಚಿತ್ರಮಂದಿರಕ್ಕೆ ಸ್ವಾಗತಿಸಿದರು.

ಶಿರಸಿಯ ನಟರಾಜ್ ಥಿಯೇಟರ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಜೊತೆ ಶಿವಣ್ಣ, ಭೈರತಿ ರಣಗಲ್ ಚಿತ್ರ ವೀಕ್ಷಿಸಿದರು.

ಶಿವರಾಜಕುಮಾರ್ ಅವರಿಗೆಗೆ ಪತ್ನಿ ಗೀತಾ,ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ ಸಾಥ್ ನೀಡಿದರು.

Related Articles

Back to top button