ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ
ನಿಗಮ(IRCTC)ವು ಶ್ರೀರಾಮನ ಜನ್ಮಸ್ಥಳದಿಂದ ಪುರಿ ಮತ್ತು ಗಂಗಾಸಾಗರಕ್ಕೆ ಪ್ರಯಾಣಿಸಲು ಅದ್ಭುತ ಪ್ಯಾಕೇಜ್ ಅನ್ನು ಹೊರತಂದಿದೆ. ಭಾರತ ದರ್ಶನ ವಿಶೇಷ ಪ್ರವಾಸಿ ರೈಲು ಮೂಲಕ ನೀವು ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು.
IRCTCಯ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ರಾಮಜನ್ಮ ಭೂಮಿ ದರ್ಶನ, ಪುರಿ, ಗಂಗಾಸಾಗರಕ್ಕೆ ಪ್ರಯಾಣಿಸಬಹುದು.
ಈ ರೈಲು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವು ನಗರಗಳ ಮೂಲಕ ಸಂಚರಿಸಲಿದೆ. ಈ ರೈಲು ಯಾತ್ರಾರ್ಥಿಗಳನ್ನು ಅಯೋಧ್ಯೆ, ವಾರಣಾಸಿ, ಬೈದ್ಯನಾಥ, ಗಂಗಾಸಾಗರ, ಪುರಿ, ಕೋನಾರ್ಕ್, ಗಯಾ ಮತ್ತು ಕೋಲ್ಕತ್ತಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲಿದೆ.
ಈ ರೈಲು ಮಾರ್ಚ್ 22ರಂದು ಹೊರಡಲಿದ್ದು, ಮಾರ್ಚ್ 31 ರಂದು ಪ್ರಯಾಣವು ಕೊನೆಗೊಳ್ಳುತ್ತದೆ. ಈ ಪ್ಯಾಕೇಜ್ ಅಡಿ ಪ್ರತಿದಿನಕ್ಕೆ ಪ್ರಯಾಣಿಕರಿಗೆ ಕೇವಲ 1 ಸಾವಿರ ರೂ. ವೆಚ್ಚವಾಗುತ್ತದೆ. ಈ ಸಂಪೂರ್ಣ ಪ್ಯಾಕೇಜ್ ನ ಬೆಲೆ ಕೇವಲ 9,450 ರೂ. ಆಗಿರುತ್ತದೆ. ಈ ಪ್ಯಾಕೇಜ್ ನಲ್ಲಿ ಪ್ರಯಾಣಿಕರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರುತ್ತದೆ.ಈ ಪ್ಯಾಕೇಜ್‌ನಲ್ಲಿ ಸ್ಥಳೀಯ ಸಾರಿಗೆ ಮತ್ತು ಮಾರ್ಗದರ್ಶಿ ಶುಲ್ಕಗಳನ್ನು ಸಹ ಸೇರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ