Kannada NewsKarnataka NewsLatest

ಬೆಳಗಾವಿ: BDCC ಬ್ಯಾಂಕ್ ಶಾಖೆಯಲ್ಲಿ ದರೋಡೆ; 5 ಕೋಟಿ ಹಣ, ಚಿನ್ನಾಭರಣ ಕದ್ದು ಪರಾರಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಬಿಡಿಸಿಸಿ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು, ಬ್ಯಾಂಕ್ ಬಾಗಿಲು ಮುರಿದು ನಕಲಿ ಕೀ ಬಳಸಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Home add -Advt

ಬರೋಬ್ಬರಿ 4 ಕೋಟಿ ರೂಪಾಯಿ ನಗದು, 1.5 ಕೋಟಿ ಮೌಲ್ಯದ ಬಂಗಾರವನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾನುವಾರ ಬೆಳಗಿನ ಜಾವ 4.40ರ ವೇಳೆಗೆ ಕಳ್ಳತನವಾಗಿದೆ ಎಂದು ಬ್ರ್ಯಾಂಚ್ ಮ್ಯಾನೇಜರ್ ತಿಳಿಸಿದ್ದಾರೆ. ಪೊಲೀಸರು, ಬ್ಯಾಂಕಿನ ಹಿರಿಯ ಸಿಬ್ಬಂದಿ ಸ್ಥಳಕ್ಕೆ ತೆರಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಗೆಳೆಯನ ಪತ್ನಿಗಾಗಿ ಸ್ನೇಹಿತನನ್ನೆ ಕೊಂದು ಸುಟ್ಟುಹಾಕಿದ ಪಾಪಿ

Related Articles

Back to top button