Latest

ಎಮ್ಮೆಯ ಸಾವಿಗೆ ಹೆಲಿಕಾಪ್ಟರ್ ಕಾರಣ ಎಂದು ಠಾಣೆಯ ಮೆಟ್ಟಿಲೇರಿದ ರೈತ 

ಪ್ರಗತಿ ವಾಹಿನಿ ಸುದ್ದಿ, ಜೈಪುರ:

ರಾಜಸ್ಥಾನದ ಅಳ್ವಾರ್ ನ ಬೆಹ್ರೂರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತನೊಬ್ಬ ತನ್ನ ಎಮ್ಮೆಯ ಸಾವಿಗೆ ಹೆಲಿಕಾಪ್ಟರ್ ನ ಶಬ್ದ ಕಾರಣ ಎಂದು ಆರೋಪಿಸಿ ಠಾಣೆಯ ಮೆಟ್ಟಿಲೇರಿದ್ದಾನೆ.

ಹೆಲಿಕಾಪ್ಟರ್ ನ ಶಬ್ದಕ್ಕೆ ಎಮ್ಮೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ರೈತ ಆರೋಪಿಸಿದ್ದು, ದೂರು ನೀಡಲು ಮುಂದಾಗಿದ್ದಾನೆ.

ಬೆಹ್ರೂರ್ ವಿಧಾನಸಭಾ ಕ್ಷೇತ್ರದ ಶಾಸಕ ಬಲ್ಜೀತ್ ಯಾದವ್ ಅವರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ ಮಾಡಲು ಮುಂದಾಗಿದ್ದರು.

ಆದರೆ ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರಾಡುತ್ತಿದ್ದ ಕಾರಣ ಅದರ ಶಬ್ದಕ್ಕೆ ಎಮ್ಮೆಗೆ ಹೃದಯಾಘಾತವಾಗಿ ಅದು ಮೃತಪಟ್ಟಿದೆ ಎಂದು ರೈತ ಆರೋಪಿಸಿದ್ದಾನೆ.

ಗುಂಬಜ್​ ಮಾದರಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಪೊಲೀಸ್ ಭದ್ರತೆ; ಕಾಮಗಾರಿ ಸ್ಥಗಿತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button