Latest

*ಬಸ್ ಹರಿದು ಕುರಿಗಾಹಿ ಹಾಗೂ 20 ಕುರಿಗಳು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಬಸ್ ವೊಂದು ಕುರಿಗಾಹಿ ಹಾಗೂ ಕುರಿಗಳ ಹಿಂಡಿನ ಮೇಲೆ ಹರಿದಿದ್ದು, ಸ್ಥಳದಲ್ಲೇ ಕುರಿಗಾಹಿ ಹಾಗೂ 20 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿಯಲ್ಲಿ ಈ ದುರಂತ ಸಂಭವಿಸಿದೆ. ನೆಲಗೇತನಹಟ್ಟಿಯ ಕುರಿಗಾಹಿ ರಾಜಪ್ಪ (30) ಮೃತ ದುರ್ದೈವಿ.

ಅಪಘಾತದಲ್ಲಿ ಕುರಿಗಾಹಿ ರಾಜಪ್ಪಗೆ ಸೇರಿದ 20 ಕುರಿಗಳು ಸಾವನ್ನಪ್ಪಿವೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt


Related Articles

Back to top button