ಪ್ರಗತಿವಾಹಿನಿ ಸುದ್ದಿ, ಸುಳ್ಯ : ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ.
ಎಲಿಮಲೆ ಮತ್ತು ಜಬಳೆ ಮಧ್ಯೆ ಘಟನೆ ಸಂಭವಿಸಿದೆ. ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಮಾರುತಿ ಕಾರು ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ನಿಶಾಂತ್ ಹಾಗೂ ಆತನ ಸಹೋದರಿ ಮೋಕ್ಷಾರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು.
ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ನಿಶಾಂತ್ ಸಾವನ್ನಪ್ಪಿದ್ದರೆ, ಆತನ ತಂಗಿ ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆಕೆಯೂ ಸಾವನ್ನಪ್ಪಿದಳೆಂದು ತಿಳಿದು ಬಂದಿದೆ.
https://pragati.taskdun.com/latest/258709-vacancies-in-the-state-out-of-43-departments-25-vacancies-are-more-than-filled/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ