Belagavi NewsBelgaum News

*ಪಿಸ್ತೂಲ್ ತೋರಿಸಿ ಹೆದರಿಸಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ಎಸ್ಕೇಪ್ ಆದ ದರೋಡೆಕೋರರು*

ಪ್ರಗತಿವಾಹಿನಿ ಸುದ್ದಿ: ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ನಿಲ್ಲಿಸಿ ಪಿಸ್ತೂಲ್ ತೋರಿಸಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಸೂರಜ್ ವನಮಾನೆ ಎಂಬುವವರು ಚಿನ್ನದ ವ್ಯಾಪಾರ ಮುಗಿಸಿಕೊಂಡು ಕೊಲ್ಲಾಪುರದಿಂದ ಕೇರಳಕ್ಕೆ ಇನೋವಾ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ ಸೂರಜ್ ವನಮಾನೆ ಹಾಗೂ ಕಾರು ಚಾಲಕ ಇಬ್ಬರು ಇದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಕೋರರ ಗುಮ್ಪು ಕಾರನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದೆ.

ಬಳಿಕ ಪಿಸ್ತೂಲ್ ತೋರಿಸಿ ಬೆದರಿಸಿ ಕಾರಿನಲ್ಲಿದ್ದ ಸೂರಜ್ ಹಾಗೂ ಕಾರು ಚಲಕನನ್ನು ಕೆಳಗಿಳಿಸಿ, 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ಎಸ್ಕೇಪ್ ಆಗಿದೆ.

ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button