Latest

ನಾಳೆಯೇ ಕೇಂದ್ರ ಸಂಪುಟ ವಿಸ್ತರಣೆ: ಕರ್ನಾಟಕದಿಂದ ಮೂವರಿಗೆ ಸ್ಥಾನ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರವೇ ಆಗುವ ಸಾಧ್ಯತೆ ಹೆಚ್ಚಾಗಿದೆ. ಬುಧವಾರ ಸಂಜೆ 5.30ಕ್ಕೆ ಸಂಪುಟದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವಸಂಪುಟಕ್ಕೆ 25  ಜನರನ್ನು ಸೇರಿಸಿಕೊಳ್ಳಲು ಅವಕಾಶವಿದ್ದು, ಕನಿಷ್ಟ 20 ಜನರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Home add -Advt

ಕರ್ನಾಟಕದಿಂದ ಮೂವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನಾರಾಯಣ ಸ್ವಾಮಿ, ರಮೇಶ ಜಿಗಜಿಣಗಿ, ಉಮೇಶ ಜಾಧವ, ಬಿ.ವೈ.ರಾಘವೇಂದ್ರ, ಶಿವಕುಮಾರ ಉದಾಸಿ, ಪ್ರತಾಪ ಸಿಂಹ, ಶೋಭಾ ಕರಂದ್ಲಾಚೆ ಮತ್ತಿತರರ ಹೆಸರು ಕೇಳಿಬರುತ್ತಿದೆ. ಅನಂತಕುಮಾರ ಹೆಗಡೆಗೆ ಅವಕಾಶ ನೀಡಬಹುದೆನ್ನುವ ಸುದ್ದಿಯೂ ಇದೆ. ನಾರಾಯಣ ಸ್ವಾಮಿ ಮತ್ತು ರಮೇಶ ಜಿಗಜಿಣಗಿಗೆ ಈಗಾಗಲೆ ದೆಹಲಿಗೆ ಬುಲಾವ್ ಬಂದಿದೆ ಎನ್ನುವ ಸುದ್ದಿ ಇದೆ.

ಈ ಮೊದಲು ಗುರುವಾರ ಕೇಂದ್ರ ಸಂಪುಟ ವಿಸ್ತರಣೆ ಎಂದು ಹೇಳಲಾಗಿತ್ತು.

ಗುರುವಾರ ಕೇಂದ್ರ ಸಚಿವ ಸಂಪುಟ ಪುನಾರಚನೆ

Related Articles

Back to top button