Kannada NewsKarnataka NewsLatest

ಭಿಕ್ಷುಕರು, ಬೀದಿ ಬದಿ ಕಾರ್ಮಿಕರಿಗೆ ಆಹಾರ ಹಂಚಿದ ಪಾಲಿಕೆ ಆಯುಕ್ತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೋವಿಡ್-19 ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ನಗರದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಲಿಕೆ ಆಯುಕ್ತ ಜಗದೀಶ್ ಕೆ‌.ಎಚ್. ಅವರು ಭಿಕ್ಷುಕರು ಹಾಗೂ ಕಾರ್ಮಿಕರಿಗೆ ಆಹಾರ ಮತ್ತು ಆಹಾರ ಸಾಮಗ್ರಿಗಳನ್ನು ವಿತರಿಸಿದರು.

Home add -Advt

ನಗರದಲ್ಲಿ ಕರ್ಫ್ಯೂ ಮಾದರಿ ವಾತಾವರಣ ಇರುವುದರಿಂದ ಭಿಕ್ಷುಕರು ಮತ್ತು ಬೀದಿ ಬದಿ ಕಾರ್ಮಿಕರು ಹಾಗೂ ಅವರ ಪುಟ್ಟ ಪುಟ್ಟ ಮಕ್ಕಳು ಹಸಿವಿನಿಂದ ಕಂಗೆಟ್ಟಿದ್ದಾರೆ. ಮಕ್ಕಳ ಸ್ಥಿತಿಯಂತೂ ಕರುಣಾಜನಕವಾಗಿದೆ.

ಇದನ್ನು ತಿಳಿದ ಮಹಾನಗರ ಪಾಲಿಕೆ ಆಯುಕ್ತರು ನಗರವನ್ನು ಸುತ್ತಾಡಿ ಹಸಿದವರಿಗೆ ಅಗತ್ಯ ಆಹಾರಗಳನ್ನು ಹಂಚಿದರು.

Related Articles

Back to top button