Latest

ಬಜರಂಗದಳ PFIಗೆ ಹೋಲಿಕೆ; ಮಲ್ಲಿಕಾರ್ಜುನ ಖರ್ಗೆಗೆ ಪಂಜಾಬ್ ಕೋರ್ಟ್ ನಿಂದ ಸಮನ್ಸ್ ಜಾರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಶ್ವಹಿಂದೂ ಪರಿಷತ್ ಅಂಗ ಸಂಸ್ಥೆ ಬಜರಂಗದಳವನ್ನು PFIಗೆ ಹೋಲಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ವಿಶ್ವಹಿಂದೂ ಪರಿಷತ್, ಬಜರಂಗದಳ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಖರ್ಗೆ ಅವರಿಗೆ ಪಂಜಾಬ್‌ನ ಸಂಗ್ರೂರ್ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ. 

Home add -Advt

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು PFI ಸಂಘಟನೆಗೆ ಹೋಲಿಕೆ ಮಾಡಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್‌ ಚಂಡೀಗಡ ಘಟಕಅದರ ಯುವ ಘಟಕ ಬಜರಂಗ ದಳ ಮೇ 4ರಂದು ನೋಟಿಸ್ ಮಲ್ಲಿಕಾರ್ಜುನ ಖರ್ಗೆ ವಿರುದ್ಧ 100 ಕೋಟಿ ರೂ. ಮಾನಹಾನಿ ಪರಿಹಾರ ಕೋರಿ ನೋಟಿಸ್‌ ಜಾರಿ ಮಾಡಿದ್ದವು. 14 ದಿನಗಳ ಒಳಗೆ 100.10 ಕೋಟಿ ರೂ ಪರಿಹಾರ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು.

 ಬಜರಂಗದಳವನ್ನು ಪಿಎಫ್‌ಐ, ಸಿಮಿ ಮುಂತಾದ ನಿಷೇಧಿತ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿರುವುದು ಮಾನಹಾನಿಕರ ಎಂದು ವಿಶ್ವಹಿಂದೂ ಪರಿಷತ್ ಪರ ವಕೀಲರು ನೋಟಿಸ್‌ನಲ್ಲಿ ದೂರಿದ್ದರು. ಆದರೆ ಕಾಂಗ್ರೆಸ್ ಈ ನೋಟೀಸ್ ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ದಾವೆ ಹೂಡಿದ್ದು ಇದೀಗ ಕೋರ್ಟ್ ಖರ್ಗೆಯವರಿಗೆ ಸಮನ್ಸ್ ಜಾರಿ ಮಾಡಿದೆ.

https://pragati.taskdun.com/the-kerala-story-fame-actress-adah-sharma-met-with-a-road-accident/

https://pragati.taskdun.com/dr-k-sudhakarfansuicidechikkaballapura/
https://pragati.taskdun.com/daughter-lobby-on-behalf-of-father-for-dcm-post/

Related Articles

Back to top button