Latest

ಅತಿಹೆಚ್ಚು ಕೊರೊನಾ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದೆ. ಪ್ರತಿ ದಿನದ ತನ್ನ ದಾಖಲೇಯನ್ನೇ ತಾನು ಮುರಿದು ಮುನ್ನುಗ್ಗುತ್ತಿದೆ. ಕಳೆದ 24 ಗಂಟೆಯಲ್ಲಿ 24,248 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 6,97,413ಕ್ಕೆ ಏರಿಕೆಯಾಗಿದೆ.

ಜಾಗತಿಕವಾಗಿ ಅತಿಹೆಚ್ಚು ಕೊರೊನಾ ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಈಗ 3ನೇ ಸ್ಥಾನಕ್ಕೇರಿದೆ. 3ನೇ ಸ್ಥಾನದಲ್ಲಿದ್ದ ರಷ್ಯಾವನ್ನು ಹಿಂದಿಕ್ಕಿದೆ. ಭಾರತದ ಕೊರೋನಾ ಪೀಡಿತರ ಸಂಖ್ಯೆ 6,97,413 ಆಗಿದ್ದರೆ, ರಷ್ಯಾದ ಕೊರೋನಾ ಪೀಡಿತರ ಸಂಖ್ಯೆ 6,81,251 ಆಗಿದೆ. ಅಮೇರಿಕಾ ಮೊದಲ ಹಾಗೂ ಬ್ರಿಜಿಲ್ ಎರಡನೇ ಸ್ಥಾನದಲ್ಲಿವೆ.

Related Articles

ಕಳೆದ 24 ಗಂಟೆಯಲ್ಲಿ 24,248 ಪ್ರಕರಣಗಳು ಕಂಡು ಬಂದಿವೆ. 425 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 19,693ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 4,24,433 ಜನ ಮಾತ್ರ. ದೇಶದಲ್ಲಿ ಇನ್ನೂ 2,53,287 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

Home add -Advt

Related Articles

Back to top button