ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.
ಕರುವಿಗೆ ‘ಗಂಗಾ’ ಎಂದು ಹೆಸರಿಡಲಾಗಿದೆ. ಕಂದು ಬಣ್ಣದ ಇದು 32 ಕೆಜಿ ತೂಕ ಹೊಂದಿದ್ದು ಚೆನ್ನಾಗಿ ಬೆಳೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
NDRI ಕರ್ನಾಲ್ ದೇಶೀಯ ಹಸುವಿನ ತಳಿಗಳಾದ ಗಿರ್ ಮತ್ತು ಸಾಹಿವಾಲ್ ತಳಿಗಳ ಕ್ಲೋನಿಂಗ್ ಕಾರ್ಯದಲ್ಲಿ ನಿರತವಾಗಿದೆ. ಗುಜರಾತಿನ ಸ್ಥಳೀಯ ತಳಿಯಾದ ಗಿರ್ ಜಾತಿಯ ಹಸುಗಳು ಅವುಗಳ ವಿಧೇಯ ಸ್ವಭಾವ ಮತ್ತು ಹಾಲಿನ ಉತ್ಕೃಷ್ಟತೆಯಿಂದಾಗಿ ಡೇರಿ ಉದ್ಯಮದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಗಿರ್ ತಳಿಯ ಹಸುಗಳು ಪ್ರತಿದಿನ 15 ಲೀಟರ್ ಹಾಲು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ