Kannada News

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಭವಿಷ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಹಪಠ್ಯೇತರ ಚಟುವಕೆಗಳ ಮುಖಾಂತರ ವಿದ್ಯೆ ಕಲಿಸಬೇಕು, ಪ್ರಸ್ತುತ ದಿನಗಳಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಸಹಕಾರ ನೀಡಬೇಕೆಂದು ಶೀತಲ ಮೇಕನಮರಡಿ ಹೇಳಿದರು.

Home add -Advt

ಸ್ಥಳೀಯ ಭಾಗ್ಯನಗರದ ರಾಮನಾಥ ಮಂಗಲ ಸಭಾಭವನದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬೇಸಿಗೆಯ ಶೈಕ್ಷಣಿಕ ಶಿಬಿರದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.If students get quality education, there is a good prospect - Pragati Vahiniಬೆಳೆಯುವ ಮಕ್ಕಳ ಪ್ರತಿಭೆ ಗುರುತಿಸಲು ಬೇಸಿಗೆ ಸಂಭ್ರಮ ಶಿಬಿರಗಳು ಸಹಕಾರಿಯಾಗುತ್ತವೆ. ಎಲ್ಲ ಮಕ್ಕಳು ಇಂಥ ಶಿಬಿರಗಳ ಲಾಭ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಅಜೀತ ಪಾಟೀಲ, ಸಂಗಮೇಶ, ಸಂತೋಷ ಸಾತಗೌಡ, ಶಶಿಕಾಂತ ಕಾಂಬಳೆ, ಮಂಜುನಾಥ ಮೋರಕರ, ಪದ್ಮರಾಜ ಬಸ್ತವಾಡ, ಸಾಗರ, ಪ್ರಕಾಶ ಪವಾರ ಹಾಗು ಉಪಸ್ಥಿತರಿದ್ದರು.////

Related Articles

Back to top button