*ಜವಾಬ್ದಾರಿಯುತ ನಾಗರೀಕರಾಗಿ ಸುಂದರ ಸಮಾಜ ಕಟ್ಟಲು ವಿದ್ಯಾರ್ಥಿಗಳಿಗೆ ಕರೆ ನೀಡಿದ ಡಿಸಿಪಿ ಸ್ನೇಹಾ*
ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಶ್ವ ಮಾದಕದ್ರವ್ಯ ವಸ್ತು ವಿರೋಧಿ ದಿನದ ಅಂಗವಾಗಿ ಮಾದಕ ವಸ್ತುಗಳ ಬಳಕೆ ಹಾಗೂ ಸೇವನೆ ವಿರೋಧಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಡೆಪ್ಯೂಟಿ ಕಮಿಷನರ್ ಆಪ್ ಪೋಲಿಸ ಪಿ ವಿ ಸ್ನೇಹಾ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಮಾಡುವುದಕ್ಕಿಂತ ಹೆಚ್ಚಾಗಿ ಯುವ ಜನರಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಬದುಕಿನ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅದರ ಬಳಕೆಯನ್ನೆ ತಡೆಯುವುದು ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಇಂದಿನ ಯುವ ಜನರ ಭವ್ಯ ಭವಿಷ್ಯ ನಾಶವಾಗುವುದರೆ ಜೊತೆಗೆ ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟಿರುವ ಕನಸುಗಳು ನುಚ್ಚು ನೂರಾಗಿ ಸಮಾಜದಲ್ಲಿ ಅವಮಾನಕ್ಕಿಡಾಗುತ್ತಾರೆ.
ಬದುಕು ಎನ್ನುವುದು ಸೋಲು ಗೆಲವು ಹತಾಶೆ ಸಂತೋಷಗಳ ಕ್ಷಣಗಳಿಂದ ಕೂಡಿರುತ್ತದೆ ಹೊರತು ಹತಾಶೆ ಅಥವಾ ಸೋಲುಗಳೇ ಕೊನೆಗಳಲ್ಲಾ. ಹತಾಶೆ ಅಥವಾ ಸೋಲು ಬಂದಾಗ ತಾಳ್ಮೆಯಿಂದ ಸ್ವೀಕರಿಸಿ ಸುಂದರ ಬದುಕನ್ನ ಕಟ್ಟಿಕೊಳ್ಳುವುದರ ಜೊತೆಗೆ ಸಮಾಜದ ಜವಾಬ್ದಾರಿ ನಾಗರೀಕರಾಗಿ ಮುಂದಿನ ಪೀಳಿಗೆಗೆ ಸುಂದರ ಸಮಾಜವನ್ನು ಕಟ್ಟಿಕೊಡಬೇಕು ಎಂದು ಹೇಳಿದರು.
ಡ್ರಗ್ಸ್ ಸೇವನೆಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾತನಾಡುತ್ತ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ನೆರೆದಿದ್ದ ವಿದ್ಯಾರ್ಥಿಗಳಳಲ್ಲಿ ಮಾದಕ ವಸ್ತುಗಳ ಸೇವನೆ ಮಾರಕಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ದ್ರವ್ಯ ವಸ್ತುಗಳ ದುರ್ಬಳಕೆ ಮತ್ತು ಸೇವನೆಯಿಂದ ಉಂಟಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಮೇಡಂ ಸ್ನೇಹಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಮಯದಲ್ಲಿ ಬೆಳಗಾವಿ ಗ್ರಾಮೀಣ ಪೋಲಿಸ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಹಿರೇಮಠ, ವಿ ಟಿ ಯು ಹಣಕಾಸು ಅಧಿಕಾರಿ ಮ ಎಂ ಎ ಸಪ್ನಾ, ಹಾಜರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ವಿ ಟಿ ಯು ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ ಬಿ ಎ ವಿಭಾಗದ ಮುಖ್ಯಸ್ಥ ಪ್ರೊ ಪ್ರಲ್ಹಾದ ರಾಥೋಡ ವಂದಿಸಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ