ಅವಲಕ್ಕಿ ಮನೋಹರ
ನರಕಚತುರ್ದಶಿ ಅಮವಾಸ್ಯೆ ಬಲಿಪಾಡ್ಯ ಬಾವಬಿದಿಗೆ ಎಂದು ನಾಲ್ಕು ದಿನ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಸಂಭ್ರಮಾಚರಣೆಯಿಂದ ಆಚರಿಸುತ್ತಾರೆ.
ಬೇಕಾದ ಸಾಮಗ್ರಿಗಳು:
ಅವಲಕ್ಕಿ 4 ಕಪ್ , ಬೆಲ್ಲ 1ಕಪ್, ಬಿಳಿಯಳ್ಳು 2 ಚಮಚ, ಒಣಕೊಬ್ಬರಿ 2 ಚಮಚ, ಏಲಕ್ಕಿ ಪುಡಿ ಸ್ವಲ್ಪ , ತುಪ್ಪ 4ಚಮಚ
ಮಾಡುವ ವಿಧಾನ:
ಅವಲಕ್ಕಿಗೆ ತುಪ್ಪ ಹಾಕಿ ಗರಿ ಗರಿ ಆಗುವಂತೆ ಹುರಿಯಬೇಕು.
ಬೆಲ್ಲಕ್ಕೆ ಸ್ವಲ್ಪ ನೀರುಹಾಕಿ ಒಂದೆಳೆ ಪಾಕ ಮಾಡಬೇಕು.ಎಳ್ಳು ಕೊಬ್ಬರಿಗಳನ್ನು ಸ್ವಲ್ಪ ಹುರಿಯ ಬೇಕು.ನಂತರ ಮಾಡಿಟ್ಟ ಪಾಕಕ್ಕೆ ಹುರಿದ ಅವಲಕ್ಕಿ ಮತ್ತುಎಳ್ಳು ಕೊಬ್ಬರಿ, ಏಲಕ್ಕಿ ಪುಡಿಯನ್ನು ಹಾಕಿ ಚನ್ನಾಗಿ ಕಲಸಬೇಕು .
ಗರಿ ಗರಿಯಾದ ಅವಲಕ್ಕಿ ಮನೋಹರ ಸವಿಯಲು ರೆಡಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ