Kannada NewsKarnataka NewsLatest

*ಕೃಷಿ ಮೇಳದ ಮೊದಲ ದಿನವೇ ದುರಂತ: ಟ್ರ್ಯಾಕ್ಟರ್ ಬಿದ್ದು ವ್ಯಕ್ತಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕೃಷಿ ಮೇಳದಲ್ಲಿ ಟ್ರ್ಯಾಕ್ಟರ್ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ನಡೆದಿದೆ.

ಪರಶುರಾಮ್ (60) ಮೃತ ವ್ಯಕ್ತಿ. ಕೃಷಿ ಮೇಳದಲ್ಲಿ ಟ್ರ್ಯಾಕ್ಟರ್ ಪ್ರದರ್ಶನ ಹಾಗೂ ಮಾರಾಟಕ್ಕೆ ತರಲಾಗಿತ್ತು. ಈ ವೇಳೆ ಕ್ಯಾಂಟರ್ ಲಾರಿಯಿಂದ ಟ್ರ್ಯಾಕ್ಟರ್ ಇಳಿಸುತ್ತಿದ್ದ ವೇಳೆ ಪರಶುರಾಮ್ ಎಂಬುವವರ ಮೇಲೆ ಟ್ರ್ಯಾಕ್ಟರ್ ಬಿದ್ದಿದೆ. ಟ್ರ್ಯಾಕ್ಟರ್ ಅಡಿ ಸಿಲುಕಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೃಷಿ ಮೇಳದ ಮೊದಲ ದಿನವೇ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷ್ನನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button