Belagavi NewsBelgaum NewsKannada NewsKarnataka NewsNationalPolitics

*ಪ್ರವಾಹ ಪರಿಸ್ಥಿತಿಯಲ್ಲಿ ಸದಾ ನಾನು ನಿಮ್ಮೊಂದಿಗೆ ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾಗೂ ಮಹಾರಾಷ್ಟ್ರದಿಂದ ನೀರು ಬಿಡುತ್ತಿರುವ ಹಿನ್ನೆಲೆ, ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ವೀಕ್ಷಿಸಿ, ನದಿ ತೀರದ ಜನರ ಸಮಸ್ಯೆಗಳನ್ನು ಆಲಿಸಿ, ಸಾರ್ವಜನಿಕರು ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಯಾವುದೇ ಪರಿಸ್ಥಿಯಲ್ಲಿ ಪ್ರವಾಹ ಎದುರಾದರೂ ಕಾಳಜಿ ಕೇಂದ್ರಗಳನ್ನು ತಯಾರಿಯಲ್ಲಿಡಬೇಕು. ಜಾನುವಾರುಗಳ ಮೇವಿನ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯುತ್ ಸಮಸ್ಯೆ ಆಗದಂತೆ ಹೆಸ್ಕಾಂ ಅಧಿಕಾರಿಗಳಿಗೆ ಹೇಳಲಾಯಿತು.ಆರೋಗ್ಯ ಇಲಾಖೆ,ಕಂದಾಯ ಇಲಾಖೆ, ಪೋಲಿಸ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ಪ್ರವಾಹ ಬಗ್ಗೆ ಎಚ್ಚರಿಕೆ ವಹಿಸಿ ನಾಗರಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳವಂತೆ ತಾಲೂಕ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಮುಜಾಫರ್ ಬಳಿಗಾರ, ನೋಡಲ್ ಅಧಿಕಾರಿಗಳಾದ ಎ.ಎಸ್. ಪೂಜಾರಿ, ಪಿ.ಡಿ. ಓ. ನಂದಕುಮಾರ್ ಪಪ್ಪೆ,ಗ್ರಾಮಲೆಕ್ಕಾಧಿಕಾರಿ ಎಂ.ಎಸ್. ಸನದಿ, ಅಧಿಕಾರಿಗಳು, ನಿತೇಶ ಖೋತ, ಗ್ರಾಮ ಪಂಚಾಯತ್ ಸದಸ್ಯ ದೇವಪ್ಪ ದೇವಕಾತೆ, ಅರವಿಂದ ಖರಾಡೆ, ಬಾಬಾಸಾಬ ಖೋತ, ಸುಕಮಾ ಧನಪಾಲ ಚವ್ಹಾಣ, ಸೋಮಾ ಗಾವಡೆ, ಮಂಗಳ ಕುಂಬಾರ, ವೈಶಾಲಿ ಖರಡೆ, ದೀಪಾಲಿ ಕುಂಬಾರ, ಮಾಳಿ,ಸ್ಥಳೀಯ ಮುಖಂಡರು,ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Home add -Advt

Related Articles

Back to top button