Kannada NewsKarnataka NewsLatestPolitics

*ಚಂದ್ರಯಾನ ಯಶಸ್ಸು: ಇಸ್ರೋ ತ್ರಿವಿಕ್ರಮಕ್ಕೆ ಡಾ. ಪ್ರಭಾಕರ ಕೋರೆ ಅಭಿನಂದನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧಿಸಿರುವ ಪ್ರಗತಿಯಿಂದ ವಿಶ್ವದ ಪ್ರಬಲ ರಾಷ್ಟ್ರಗಳು ಮೊದಲಗೊಂಡು ವಿಶ್ವ ಭಾರತದತ್ತ ನೋಡುವಂತಾಗಿದೆ. ಇದು ಸಮಸ್ತ ಭಾರತೀಯರ ಹೆಮ್ಮೆಯ ಕ್ಷಣ ಎಂದು ಕೆ.ಎಲ್.ಇ ಮುಖ್ಯಸ್ಥ ಡಾ.ಪ್ರಭಾಕರ ಕೋರೆ ಹರ್ಷ ವ್ಯಕ್ತಪಡಿಸಿದ್ದಾರೆ.

Home add -Advt

ಚಂದ್ರಯಾನ ಯಶಸ್ಸು ಭಾರತೀಯರು ಅಭಿಮಾನ ಪಡುವ ಅಮೃತ ಹೆಜ್ಜೆ. ಯುವ ವಿಜ್ಞಾನಿಗಳಿಗೆ, ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಭಾರತೀಯ ವಿಜ್ಞಾನಿಗಳು ಏನೆಲ್ಲ ವಿಕ್ರಮವನ್ನು ಸಾಧಿಸಬಹುದು ಎನ್ನುವುದಕ್ಕೆ ಚಂದ್ರಯಾನ ಮೂರರ ಯಶಸ್ಸು ಸಾಕ್ಷಿಯಾಗಿ ನಿಂತಿದೆ. ಇಸ್ರೋದ ಸಮಸ್ತ ವಿಜ್ಞಾನಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Related Articles

Back to top button