National

*ಎಲ್‌ಒಸಿ ಬಳಿ ರಾತ್ರಿಯಿಡೀ ಫೈರಿಂಗ್*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ್ ಭಯೋತ್ಪಾದಕರು ಅಟ್ಟಹಾಸ ಮೇರೆದಿರುವ ಹಿನ್ನಲೆ ಪಾಕಿಸ್ತಾನ ಸೇನೆಯು ಗುರುವಾರ ರಾತ್ರಿಯಿಡೀ ಎಲ್‌ಒಸಿ ಬಳಿ ಗುಂಡಿನ ದಾಳಿ ಆರಂಭಿಸಿದೆ.

ಎಲ್ಓಸಿ ಬಳಿಯ ಹಲವು ಪಾಕಿಸ್ತಾನಿ ಸೇನಾ ಪೋಸ್ಟ್‌ಗಳಿಂದ ಗುಂಡಿನ ದಾಳಿ ನಡೆದಿದ್ದು ಇದಕ್ಕೆ ಭಾರತ ಸೇನೆ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ.

Home add -Advt

ಇದು ಇತ್ತೀಚಿನ ದಿನಗಳಲ್ಲಿ ವರದಿಯಾಗದ ಅಸಹಜ ಬೆಳವಣಿಗೆಯಾಗಿದೆ ಎಂದು ಸೇನಾ ಮೂಲಗಳು ಮೂಲಗಳು ತಿಳಿಸಿವೆ.

ಪಾಕ್ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದ್ದು, ಭಾರತ ಸೇನೆಯ ಕಡೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಪಾಕಿಸ್ತಾನಿ ಸೇನೆಯು ಗಡಿಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತು. ಇದಕ್ಕುತ್ತರವಾಗಿ ನಮ್ಮ ಪಡೆಗಳು ಪ್ರತಿದಾಳಿ ನಡೆಸಿದವು. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕಲಾಗಿತ್ತಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದರು.

Related Articles

Back to top button