Latest

*ಕಟ್ಟಡದಿಂದ ತಳ್ಳಿ ಸ್ನೇಹಿತನಿಂದಲೇ ಯುವಕನ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಸ್ನೇಹಿತನೇ, ಯುವಕನೊಬ್ಬನನ್ನು ಕಟ್ಟದದಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ.

Home add -Advt

ಉತ್ತರ ಪ್ರದೇಶ ಮೂಲದ ಅಭಿಷೇಕ್ ಎಂಬಾತ, ವಿಶಾಲ್ ಯಾದವ್ ಎಂಬಾತನನ್ನು ನಿರ್ಮಾಣ ಹಂತದ ಕಟ್ಟದದಿಂದ ತಳ್ಳಿ ಕೊಲೆ ಮಾಡಿದ್ದಾನೆ. ಇಬ್ಬರೂ ತಡರಾತ್ರಿ ನಿರ್ಮಾಣ ಹಂತದ ಕಟ್ಟದದಲ್ಲಿ ಮದ್ಯಪಾನ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಗಲಾಟೆ ವೇಲೆ ಅಭಿಷೇಕ್ ಎಂಬಾತ ವಿಶಾಲ್ ನನ್ನು ಕಟ್ಟಡದಿಂದ ತಳ್ಳಿದ್ದಾನೆ.

ಕ್ಟ್ಟಡದಿಂದ ಕೆಳಗೆ ಬಿದ್ದ ವಿಶಾಲ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಭಿಷೇಕ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Related Articles

Back to top button