ಗಣೇಶೋತ್ಸವ: ಸೋಮವಾರ(ಸೆ.18) ರಜೆ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗಣೇಶೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮುಂಚಿತವಾಗಿಯೇ ಘೋಷಿಸಿರುವಂತೆ ಸೋಮವಾರ(ಸೆ.18)ವೇ ರಜೆ ಇರುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎ ಆರ್) ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಈ ವಿಷಯವನ್ನು ಸ್ಪಷ್ಟಪಡಿದ್ದಾರೆ.
ಗಣೇಶೋತ್ಸವ ರಜೆ ಸೋಮವಾರವೋ, ಮಂಗಳವಾರವೋ? ಎನ್ನುವ ಕುರಿತು ಗೊಂದಲ ಉಂಟಾಗಿತ್ತು. ಹಬ್ಬವನ್ನು ಹೆಚ್ಚಿನವರು ಮಂಗಳವಾರ ಆಚರಿಸುವುದರಿಂದ ಮಂಗಳವಾರ ರಜೆ ಘೋಷಿಸಬೇಕು ಎನ್ನುವ ಬೇಡಿಕೆಯನ್ನು ನೌಕರರ ಸಂಘ ಮುಂದಿಟ್ಟಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನಿ ಸಲ್ಲಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ