Latest

ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಮತ್ತೊಂದು ಸಂಕಷ್ಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ, ಆಲಿಯಾ ಭಟ್ ಅಭಿನಯದಲ್ಲಿ ಮೂಡಿ ಬಂದಿರುವ ಗಂಗೂಬಾಯಿ ಕಾಠಿಯಾವಾಡಿ ಚಿತ್ರ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.

ಫೆ.25ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಬಿಡುಗಡೆಗೆ ಎರಡು ದಿನವಿರುವಾಗ ಮತ್ತೆ ವಿವಾದಕ್ಕೆ ಸಿಲುಕಿದೆ. ಸಿನಿಮಾದಲ್ಲಿ ಪ್ರದೇಶದ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಶಾಸಕರೊಬ್ಬರು ಸಿನಿಮಾ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕಾಮಾಟಿಪುರ ನಿವಾಸಿ, ಮಹಾರಾಷ್ಟ್ರ ಶಾಸಕ ಅಮಿನ್ ಪಟೇಲ್, ಗಂಗೂಬಾಯಿ ಕಾಠಿಯಾವಾಡಿಯಲ್ಲಿ ಸ್ಥಳದ ಹೆಸರು ಬಳಸಿರುವುದಕ್ಕೆ ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದು, ಚಿತ್ರದ ಹೆಸರನ್ನು ಬದಲಿಸಬೇಕು ಎಂದು ಇದೀಗ ಬಾಂಬೆ ಹೈಕೋರ್ಟ್ ಚಿತ್ರದ ನಿರ್ದೇಶಕ ಹಾಗೂ ನಟಿ ಆಲಿಯಾಗೆ ಸಮನ್ಸ್ ಜಾರಿ ಮಾಡಿದೆ.

ನಟ ಚೇತನ್ 14 ದಿನ ನ್ಯಾಯಾಂಗ ಬಂಧನಕ್ಕೆ

Related Articles

Back to top button