Latest

*ನೀರಿನ ತೊಟ್ಟಿಗೆ ಬಿದ್ದು ಪುಟ್ಟ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ನೀರಿನ ತೊಟ್ಟಿಗೆ ಬಿದ್ದು ಪುಟ್ಟ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಕನಕಪುರ ತಾಲೂಕಿನ ಅಡಕೆ ಹಳ್ಳ ಗ್ರಾಮದಲ್ಲಿ ನಡೆದಿದೆ.

ಪ್ರದ್ವಿನ್ (3) ಸಾನ್ನನಪ್ಪಿರುವ ದುರ್ದೈವಿ. ಈತ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಅಡಕೆ ಹಳ್ಳ ಗ್ರಾಮದ ಸಿಂಧು ಮತ್ತು ಶ್ರೀನಿವಾಸ್‌ ದಂಪತಿಯ ಪುತ್ರ.

Home add -Advt

ಎರಡನೇ ಹೆರಿಗೆಗೆಂದು ಸಿಂಧು ತವರು ಮನೆಯಾದ ಅಡಕೆ ಹಳ್ಳಕ್ಕೆ ಬಂದಿದ್ದರು. ಬುಧವಾರ ಸಂಜೆ ಮನೆ ಮುಂಭಾಗದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದಾಗ ಅದು ನೀರಿನ ತೊಟ್ಟಿಗೆ ಬಿದ್ದಿದೆ. ಹೀಗಾಗಿ ಅದನ್ನು ತೆಗೆದುಕೊಳ್ಳಲು ಹೋಗಿ ಮಗು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನಪ್ಪಿದೆ.

ಇತ್ತ ಆಟವಾಡುತ್ತಿದ್ದ ಕಂದಮ್ಮ ಮನೆಗೆ ಬಾರದಿದ್ದರಿಂದ ಆತಂಕಗೊಂಡು ಸಿಂಧು ಮತ್ತು ಅವರ ಪೋಷಕರು ಹುಡುಕಾಡಿದಾಗ ಮಗು ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button