Latest

*ಹೆಲಿಕಾಪ್ಟರ್ ದುರಂತ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು*

ಪ್ರಗತಿವಾಹಿನಿ ಸುದ್ದಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಇರಾನ್ ಅಧ್ಯಕ್ಷರು ಮೃತಪಟ್ಟಿದ್ದಾರೆ.

ಪತನಗೊಂಡಿರುವ ಹೆಲಿಕಾಪ್ಟರ್ ಪತ್ತೆಯಾಗಿದ್ದು ಹಾಗೂ ಹೆಲಿಕಾಪ್ಟರ್ ನಲ್ಲಿದ್ದ ಇರಾನ್ ಅಧ್ಯಕ್ಷರು ಸೇರಿದಂತೆ ನಾಲ್ವರ ಮೃತದೇಹ ಹೊರತೆಗೆಯಲಾಗಿದೆ.

ದಟ್ಟ ಮಂಜು ಇದ್ದ ಕಾರಣ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಟೆಹ್ರಾನ್‌ನಿಂದ ಸುಮಾರು 600 ಕಿಮೀ ದೂರದ ಪೂರ್ವ ಅಜರ್‌ಬೈಜಾನ್‌ನ ಜೋಲ್ಫಾದಲ್ಲಿ ರೈಸಿ ಅವರು ಇದ್ದ ಹೆಲಿಕಾಪ್ಟರ್ ನಿನ್ನೆ ಪನತಗೊಂಡಿತ್ತು. ಘಟನೆಯಲ್ಲಿ ಅಧ್ಯಕ್ಷರೊಡನೆ ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ , ಇರಾನ್‌ ದೊರೆ ಖೊಮೇನಿಯವರ ಪ್ರತಿನಿಧಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.‌

Related Articles

Back to top button