Latest

ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಟೆಕ್ಕಿ; ಕೆಲಸ, ಹೆಂಡತಿ-ಮಕ್ಕಳನ್ನೂ ಕಳೆದುಕೊಂಡು ಕಣ್ಣೀರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಜಾಲ ಹೆಚ್ಚಾಗಿದ್ದು, ಇದೀಗ ಟೆಕ್ಕಿಯೋರ್ವ ಮಯಾಂಗನೆಯ ಬಲೆಗೆ ಬಿದ್ದು, ಪತ್ನಿ, ಮಕ್ಕಳು, ಹಣವನ್ನೂ ಕಳೆದುಕೊಂಡು ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

ಮೂರು ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿಗೆ ಪತ್ನಿ ಹಾಗು ಇಬ್ಬರು ಮಕ್ಕಳು. ಸುಖಿ ಸಂಸಾರ. ಆದರೆ ಸ್ನೇಹಿತನ ಮೂಲಕ ಪರಿಚಿತಳಾದ ಮಾಯಾಂಗನೆಯೊಬ್ಬಳು ಸಲುಗೆ ಬೆಳೆಸಿಕೊಂಡು ಸೆಲ್ಫೀ ವಿಡಿಯೋ ತೆಗೆದುಕೊಂಡಿದ್ದಳು. ಅನಾರೋಗ್ಯದ ಕಾರಣವೊಡ್ಡಿ ಅಗಾಗ ಹಣ ಪಡೆಯುತ್ತಿದ್ದಳು. ಬಳಿಕ ಹನಿಟ್ರ್ಯಾಪ್ ಜಾಲದಲ್ಲಿ ಟೆಕ್ಕಿಯನ್ನು ಕೆಡವಿದ್ದಾಳೆ.

ಫೋನ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ಫೋಟೋ, ವಿಡಿಯೋಗಳನ್ನು ಪತ್ನಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಆಕೆ ಹೇಳಿದಂತೆ ಟೆಕ್ಕಿ 20 ಲಕ್ಷ ಹಣ ಕೊಟ್ಟ ಮೇಲೂ ಯುವತಿಯ ಕಾಟ ನಿಂತಿಲ್ಲ. ಟೆಕ್ಕಿ ಕೆಲಸ ಮಾಡುವ ಕಂಪನಿಗೂ ಮೇಲ್ ಕಳುಹಿಸಿ ರಾದ್ದಾಂತ ಮಾಡಿದ್ದಾಳೆ. ಟೆಕ್ಕಿ ಕೆಲಸವನ್ನೇ ಕಳೆದುಕೊಂಡಿದ್ದಾನೆ. ಮತ್ತೆ ಹಣಕ್ಕಾಗಿ ಯುವತಿ ಬೇಡಿಕೆ ಇಟ್ಟಿದ್ದಾಳೆ. ಆದರೆ ಹಣಕೊಡಲು ಒಪ್ಪದಿದ್ದಾಗ ಪತ್ನಿಗೆ ಫೋಟೋ, ವಿಡಿಯೋ ಕಳುಹಿಸಿದ್ದಾಳೆ

ಪತಿಯ ಪರಸ್ತ್ರೀ ಸಂಗದ ಬಗ್ಗೆ ತಿಳಿದು ಪತ್ನಿ ಹಾಗೂ ಮಕ್ಕಳು ಆತನಿಂದ ದೂರವಾಗಿದ್ದಾರೆ. ಸಧ್ಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಟೆಕ್ಕಿ, ಹನಿಟ್ರ್ಯಾಪ್ ಜಾಲದ ವಿರುದ್ಧ ದೂರು ನೀಡಿದ್ದಾರೆ.

Home add -Advt

ಮಹಾ ಸಚಿವರನ್ನು ಬೆಳಗಾವಿಯೊಳಗೆ ಬಿಟ್ಟುಕೊಂಡರೆ ಪಾಠ ಕಲಿಸುವುದು ನಿಶ್ವಿತ: ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ

https://pragati.taskdun.com/karnataka-rakshana-vedike-strongly-opposes-the-entry-of-maharashtra-ministers-in-belagavi/

Related Articles

Back to top button