GIT add 2024-1
Laxmi Tai add
Beereshwara 33

ದೇಶದ ಪುರುಷರಲ್ಲಿ ಹೆಚ್ಚುತ್ತಿದೆ ವೀರ್ಯಾಣು ಕೊರತೆ; ನಂ.1 ಸ್ಥಾನದಲ್ಲಿ ಪಶ್ಚಿಮ ಬಂಗಾಳ

ಸಮೀಕ್ಷೆಯೊಂದರ ವರದಿಯಿಂದ ಬಹಿರಂಗ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಕೋಲ್ಕೊತ್ತಾ: ಆಧುನಿಕ ಜೀವನ ಶೈಲಿಯಲ್ಲಿನ ವ್ಯಾಯಾಮದ ಕೊರತೆ ನಾನಾ ರೀತಿಯ ಅನಾರೋಗ್ಯದ ಕೊರತೆಗಳಿಗೆ ಕಾರಣವಾಗುತ್ತಿದೆ. ಬಿಪಿ, ಶುಗರ್ ಇತ್ಯಾದಿಗಳಷ್ಟೇ ಅಲ್ಲದೆ, ವೀರ್ಯಾಣುವಿನ ಕೊರತೆಯ ಸಮಸ್ಯೆಯನ್ನೂ ಇದು ಹುಟ್ಟುಹಾಕಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಅನೇಕ ಪರುಷರೀಗ ವೀರ್ಯಾಣುವಿನ ಕೊರತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.

ಇಂಥದ್ದೊಂದು ವಿಷಯ ಬಹಿರಂಗಪಟ್ಟಿರುವುದು ಸಮೀಕ್ಷೆಯೊಂದರ ವರದಿಯಿಂದ. ಪುರುಷರಲ್ಲಿನ ವೀರ್ಯಾಣು ಕೊರತೆ ಸಮಸ್ಯೆ ಸಂತಾನಹೀನತೆ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಈ ಸಮೀಕ್ಷೆ ಬಿಚ್ಚಿಟ್ಟಿದೆ.

ಈ ಸಮಸ್ಯೆ ದೇಶದ ಎಲ್ಲ ಭಾಗಗಳಲ್ಲೂ ವ್ಯಾಪಕವಾಗುತ್ತಿದ್ದು ಈ ಪೈಕಿ ಬಂಗಾಳದ ಪುರುಷರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅನೇಕ ದಂಪತಿ ಈ ಸಮಸ್ಯೆಯಿಂದಾಗಿ ಫರ್ಟಿಲಿಟಿ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ಎಡತಾಕುತ್ತಿದ್ದು ಪುರುಷರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ದೌರ್ಬಲ್ಯ ಆವರಿಸುತ್ತಿರುವುದು ಸಾಬೀತಾಗಿದೆ.

ಬಂಗಾಳದಲ್ಲಿ ಐವಿಎಫ್ ಪರೀಕ್ಷೆಗೆ ಒಳಪಟ್ಟ 64,452 ದಂಪತಿಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಶೇ.86ರಷ್ಟು ಪುರುಷರು ವೀರ್ಯಾಣು ಕೊರತೆಯ ಸಮಸ್ಯೆಗೆ ಒಳಪಟ್ಟಿರುವುದು ಕಂಡುಬಂದಿದ್ದಾಗಿ ಅಧ್ಯಯನ ವರದಿ ಹೇಳಿದೆ. ಇಂಥ ಪ್ರಕರಣಗಳಲ್ಲಿ ಪ್ರತಿ 3ರಲ್ಲಿ ಒಂದು ವೀರ್ಯಾಣು ವಿರೂಪ ಸಮಸ್ಯೆ ಕಂಡುಬಂದಿದೆ. ಸಂತಾನ ಹೀನತೆಯ ಶೇ. 61ರಷ್ಟು ಪ್ರಕರಣಗಳಲ್ಲಿ ಪುರುಷರ ದೌರ್ಬಲ್ಯವೇ ಹೆಚ್ಚಾಗಿ ಕಂಡುಬಂದಿದೆ.

ವೀರ್ಯಾಣುಗಳ ಸಂಖ್ಯೆ, ಅವುಗಳ ಚಲನಶೀಲತೆ ಹಾಗೂ ವಿರೂಪಗೊಳ್ಳುವಿಕೆಯ ಮೂರು ಮಾನದಂಡಗಳನ್ನುಟ್ಟುಕೊಂಡು ಜನವರಿಯಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಐವಿಎಫ್ (ಇನ್- ವಿಟ್ರೋ ಫರ್ಟಿಲೈಸೇಷನ್) ಪರೀಕ್ಷೆಗೆ ಒಳಪಡುವವರಲ್ಲಿ ಬಂಗಾಳಿ ಪುರುಷರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

Emergency Service

2018ರ ಅವಧಿಯಲ್ಲಿ ಶೇ.79ರಷ್ಟಿದ್ದ ಸಮಸ್ಯೆ 2021ರಲ್ಲಿ ಶೇ. 96ಕ್ಕೆ ಏರಿಕೆಯಾಗಿತ್ತು. ಅಧ್ಯಯನದ ಹಿನ್ನೆಲೆಯಲ್ಲಿ ಪರೀಕ್ಷಗೊಳಪಡಿಸಲಾದ ಶೇ. 10.8 ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಶೂನ್ಯವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಇಂದಿರಾ ಐವಿಎಫ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ನಿತೀಶ ಮುರ್ಡಿಯಾ ತಿಳಿಸಿದ್ದಾರೆ.

ಮದುವೆಯಾದ ಮೇಲೆ ಸಕಾಲಕ್ಕೆ ಮಕ್ಕಳಾಗಲಿಲ್ಲವೆಂದಾಗ ಮಹಿಳೆಯರನ್ನಷ್ಟೇ ಪರೀಕ್ಷೆಗೆ ಒಳಪಡಿಸುವ ಸಾಮಾನ್ಯ ಮಾನಸಿಕತೆ ಬಹುತೇಕರಲ್ಲಿದೆ. ಆದರೆ ಫಲವತ್ತತೆ ಸಮಸ್ಯೆ ಮಹಿಳೆಯರಷ್ಟೇ ಪುರುಷರಲ್ಲೂ ಇದೆ ಎನ್ನುತ್ತಾರೆ ಬಿರ್ಲಾ ಐವಿಎಫ್ ಕೇಂದ್ರದ ಮುಖ್ಯಸ್ಥ ಸೌರನ್ ಭಟ್ಟಾಚಾರ್ಯ.

ನಗರ ಪ್ರದೇಶಗಳಲ್ಲೇ ಹೆಚ್ಚು: 

ವೀರ್ಯಾಣುವಿನ ವಿರೂಪಗೊಳ್ಳುವಿಕೆ ಸಮಸ್ಯೆ ಗ್ರಾಮಿಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಹೆಚ್ಚಾಗಿ ಕಂಡುಬಂದಿದೆ ಎಂಬುದು ಸಹ  ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶ. ಹೆಚ್ಚಿನ ಜನ ಆಧುನಿಕ ಜೀವನ ಶೈಲಿಯಿಂದಾಗಿ ದೇಹಕ್ಕೆ ವ್ಯಾಯಾಮ ನೀಡದಿರುವುದು ಒಂದು ಕಾರಣವಾದರೆ ಅನಿಯಮಿತ, ಕಲಬೆರಕೆ, ಜಂಕ್ ಫುಡ್ ಇತ್ಯಾದಿ ಆಹಾರ ಪದ್ಧತಿ ಕೂಡ ಸಂತಾನಹೀನತೆಯ ಸಮಸ್ಯೆ ಸೃಷ್ಟಿಸುತ್ತಿದೆ ಎಂಬುದನ್ನು ಸಮೀಕ್ಷೆ ನಡೆಸಿದಾಗ ಕಂಡುಕೊಳ್ಳಲಾಗಿದೆ.

ಸದ್ಯ ಬಂಗಾಳದಲ್ಲಿ ತಾರಕಕ್ಕೇರಿರುವ ಸಮಸ್ಯೆ ದೇಶದ ವಿವಿಧೆಡೆ ಏರುತ್ತಲೇ ಸಾಗುತ್ತಿದ್ದು ಮುಂಬರುವ ದಿನಗಳಲ್ಲಿ ಸಂತಾನಹೀನತೆಯ ಕೊರಗು ಇನ್ನೂ ಹೆಚ್ಚು ಪ್ರಮಾಣದಲ್ಲಿ ಕಾಡಲಿದೆ ಎಂಬುದು ತಜ್ಞರ ಆತಂಕ.

ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಟೆಕ್ಕಿ; ಕೆಲಸ, ಹೆಂಡತಿ-ಮಕ್ಕಳನ್ನೂ ಕಳೆದುಕೊಂಡು ಕಣ್ಣೀರು

Bottom Add3
Bottom Ad 2