Latest

ಹನಿ ಟ್ರ್ಯಾಪ್; ನ್ಯೂಸ್ ಚಾನಲ್ ಮಾಲೀಕ ಸೇರಿ ನಾಲ್ವರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹನಿ ಟ್ರ್ಯಾಪ್ ಮಾಡಿ ಉದ್ಯಮಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಖಾಸಗಿ ಸುದ್ದಿ ವಾಹಿನಿಯ ಮಾಲೀಕ ವೀರೇಶ್, ಜಾನ್ ಕೆನಡಿ, ನರ್ಮಲ್ ಬಾಬು ಹಾಗೂ ಇನ್ನೋರ್ವ ವ್ಯಕ್ತಿ ಎಂದು ಗುರುತಿಸಲಾಗಿದೆ.

ಆರೋಪಿಗಳು ತಮಿಳುನಾಡು ಮೂಲದ ಉದ್ಯಮಿಯನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ 34 ಲಕ್ಷ ರೂ ವಸೂಲಿ ಮಾಡಿದ್ದರು. ನಂತರ ಹಣಕ್ಕಾಗಿ ಮತ್ತೆ ಮತ್ತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಇದರಿಂದ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ಅಂತಿಮವಾಗಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button