World

*BREAKING: ಪಾಕಿಸ್ತಾನದ ಸೇನಾನೆಲೆ ಉಡೀಸ್: ಭಾರತೀಯ ಸೇನೆಯಿಂದ ಪಾಕ್ ನ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಸೇನೆ ದಾಳಿಗೆ ಯತ್ನ ನಡೆಸಿದ್ದನ್ನು ಭಾರತೀಯ ಸೇನೆ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ವಿಫಲಗೊಳಿಸಿದೆ. ಪಾಕಿಸ್ತಾನದ ದಾಳಿಗೆ ತಿರುಗೇಟು ನೀಡಿರುವ ಭಾರತೀಯ ಸೇನೆ ಇಂದು ಪಾಕಿಸ್ತಾನದ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ.

ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ನಲ್ಲಿ ಪಾಕ್ ಸೇನಾ ನೆಲೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ. ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವುದು ಭಾರತದ ಉದ್ದೇಶವಾಗಿರಲಿಲ್ಲ. ಉಗ್ರರ ನೆಲೆ ಧ್ವಂಸಗೊಳಿಸುವುದಷ್ಟೇ ಉದ್ದೇಶವಾಗಿತ್ತು. ಆದರೆ ನಿನ್ನೆ ರಾತ್ರಿ ಪಾಕಿಸ್ತಾನ ಸೇನೆ ಭಾರತದ 15 ನಗರಳ ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿತ್ತು. ಇದನ್ನು ಭಾರತದ ಏರ್ ಡಿಫೆನ್ಸ್ ಯಶಸ್ವಿಯಾಗಿ ತಡೆದಿದೆ. ನಮ್ಮ ನಾಗರಿಕರನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಲಾಹೋರ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕ್ ಸೇನಾ ನೆಲೆ ಧ್ವಂಸವಾಗಿದೆ ಎಂದು ತಿಳಿಸಿದೆ.

ಇನ್ನೊಂದೆಡೆ ಭಾರತೀಯ ಸೇನೆ ಪಾಕಿಸ್ತಾನದ 14 ನಗರಳ ಮೇಲೆ ನಿರಂತರ ಡ್ರೋನ್ ದಾಳಿ ನಡೆಸಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿ, ಗುರ್ಜನ್ ವಾಲ, ಮೈನೊ, ಧರಕೈ, ಗುಜ್ರಾತ್, ಬಹವಲ್ಪುರ ಸೇರಿದಂತೆ 14 ನಗರಗಳ ಮೇಲೆ ಭಾರತದಿಂದ ಡ್ರೋನ್ ದಾಳಿ ನಡೆದಿದೆ ಎಂದು ಪಾಕಿಸ್ತಾನ ಆರೋಪಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button