National

*ಆಪರೇಷನ್ ಸಿಂಧೂರ 2.0: ಸರ್ವಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಆಪರೇಷನ್ ಸಿಂಧೂರದ ಬಗ್ಗೆ ವಿಪಕ್ಷಗಳಿಗೆ ಮಾಹಿತಿ ನೀಡಲು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು. 

ರಕ್ತ ಬೀಜಾಸುರರ ವಿರುದ್ಧದ ನಡೆದ ಆಪರೇಷನ್ ಸಿಂಧೂರದ ಬಗ್ಗೆ ವಿರೋಧ ಪಕ್ಷಗಳಿಗೆ ಸರ್ಕಾರ ಮಾಹಿತಿ ನೀಡಿತು. 

Home add -Advt

ಸೇನೆಯ ಏರ್‌ಸ್ಟೈಕ್‌ಗೆ ವಿರೋಧಪಕ್ಷಗಳು ಕೂಡಾ ಬಹುಪರಾಕ್ ಎಂದವು. ಕೇಂದ್ರ ಸರ್ಕಾರದ ಜೊತೆ ಇರೋದಾಗಿ ಭರವಸೆ ನೀಡಿದವು.

ಆಪರೇಷನ್ ಸಿಂಧೂರದಲ್ಲಿ 100 ಉಗ್ರರನ್ನು ಹತ್ಯೆ ಮಾಡಿದ್ದೇವೆ. ಒಂದು ವೇಳೆ ಪಾಕಿಸ್ತಾನ ಮತ್ತೆ ಕಾಲ್ಕೆರೆದು ಬಂದರೆ ಆಪರೇಷನ್ ಸಿಂಧೂರ 2.0 ಮಾಡುತ್ತೇವೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಗಿದಿಲ್ಲ. ಪಾಕಿಸ್ತಾನ ಉಗ್ರರ ವಿರುದ್ಧ ಕಾರ್ಯಾಚರಣೆ ಮತ್ತಷ್ಟು ಮುಂದುವರೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ.

Related Articles

Back to top button