Latest

Interesting News – ಶ್ರೀ ಕರೋನಮ್ಮ ದೇವಿಗೆ ಉಡಿ ತುಂಬಿ ಕಳುಹಿಸಿಕೊಟ್ಟ ಗ್ರಾಮಸ್ಥರು

ಗ್ರಾಮದ ಪ್ರತಿಯೊಂದು ಮನೆಯಲ್ಲಿ ಹಬ್ಬದ ಸಡಗರ – ಲೋಕದಿಂದ ಹೊರಟು ಹೋಗು ತಾಯಿ ಎಂದು ಪ್ರಾರ್ಥನೆ

ಪ್ರಗತಿವಾಹಿನಿ ಸುದ್ದಿ, ಕೂಡ್ಲಿಗಿ (ಬಳ್ಳಾರಿ) –  ನಮ್ಮ ರಾಷ್ಟ್ರ, ರಾಜ್ಯಗಳು ಹಳ್ಳಿಗಳಿಂದ ಕೂಡಿದ್ದು,  ಸಹಸ್ರಾರು ಸಂಪ್ರದಾಯಗಳು ಜಾರಿಯಲ್ಲಿವೆ. ಅವು ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿದ್ದು, ಜಾನಪದ ಆಚರಣೆಯ ರೂಪುತಾಳಿವೆ. ಸ್ಥಳಕ್ಕನುಗುಣವಾಗಿ ವಿಭಿನ್ನಾಗಿದ್ದರೂ ಅವುಗಳ ಆಚರಣೆಯ ಉದ್ದೇಶ ಒಂದೇ ಲೋಕಕಲ್ಯಾಣ. ಅವು ಗ್ರಾಮೀಣ ಜನತೆಯ ಹೃದಯ ಶ್ರೀಮಂತಿಕೆಯ ಪ್ರತೀಕವಾಗಿವೆ.

ಅದಕ್ಕೆ ಸಾಕ್ಷಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ. ಇಲ್ಲಿಂದು ಇಡೀ ಗ್ರಾಮದ ಜನತೆ ಗ್ರಾಮದ ಪ್ರತಿಯೊಬ್ಬರು, ಹಸುವಿನ ಸಗಣಿಯಿಂದ ತಾವೇ ತಯಾರಿಸಿದ ಶ್ರೀಕರೋನಮ್ಮಳನ್ನು ವಿಧಿವತ್ತಾಗಿ ಪೂಜಿಸಿ ಉಡಿತುಂಬಿ, ತಮ್ಮ ಗ್ರಾಮದ ಹೊರವಲಯಕ್ಕೆ ತಾವೇ ತೆರಳಿ ಕಳುಹಿಸಿದರು.
ಇಂದು ಗ್ರಾಮದ ಪ್ರತಿಯೊಂದು ಮನೆಯಲ್ಲಿ ಹಬ್ಬದ ಸಡಗರ ನಿಮಾ೯ಣವಾಗಿತ್ತು. ಗ್ರಾಮದಲ್ಲಿರುವ ಪ್ರತಿಯೊಂದು ಕೋಮಿನವರು, ಬೇಗ ಎದ್ದು ಮನೆಯಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿ, ಸಿಹಿ ಖಾಧ್ಯಗಳನ್ನು ತಯಾರಿಸಿ ತಾವೇ ತಮ್ಮ ಮನೆಯಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ ಶ್ರೀಕರೋನಮ್ಮ ದೇವಿಯನ್ನು, ವಿಧಿವತ್ತಾಗಿ ಆರಾಧಿಸಿ, ತಾವು ತಯಾರಿಸಿದ ಸಿಹಿ ಖಾಧ್ಯಗಳನ್ನು ಶ್ರೀಕರೊನಮ್ಮಳಿಗೆ ಉಡಿತುಂಬಿ, ನೈವ್ಯೇಧ್ಯಗೈದು, ತಮ್ಮ ಮನೆಯಂಗಳದಿಂದ, ಗ್ರಾಮದಿಂದ, ನಾಡಿನಿಂದ, ರಾಷ್ಟ್ರಗಳಿಂದ ಮಾತ್ರವಲ್ಲ ಲೋಕದಿಂದ ಹೊರಟು ಹೋಗು ತಾಯಿ ಎಂದು ಸವ೯ರೂ ಬೇಡಿಕೊಂಡಿದ್ದಾರೆ.
ತದನಂತರ ಎಲ್ಲಾ ಭಕ್ತರು ಮನೆಗೊಬ್ಬರಂತೆ ಶ್ರೀಕೊರೋನಮ್ಮಳನ್ನು, ವಿಧಿವತ್ತಾಗಿ ತಮ್ಮ ತಮ್ಮ ಕೈಯಲ್ಲಿ ಹಿಡಿದುಕೊಂಡು, ಶ್ರೀ ಕರೋನಮ್ಮಳಿಗೆ ಉಡಿತುಂಬಿ ಸಾಮೂಹಿಕವಾಗಿ, ಗ್ರಾಮದಿಂದ ಒಂದು ಕಿಮೀ ಅಂತರದಲ್ಲಿರುವ ಬೃಹತ್ ಬೇವಿನ ಮರದೆಡೆಗೆ ತೆರಳಿ ಮರದ ಬುಡದಲ್ಲಿ ಸ್ಥಾಪಿಸಿ ಹಿಂದಿರುಗಿರುವ ಸಾಂಪ್ರದಾಯಿಕ ಆಚರಣೆ ಜರುಗಿದೆ. ಇದರಿಂದಾಗಿ ಕೊರೋನಾ ಮಹಾಮಾರಿಯಿಂದ ಗ್ರಾಮ ಮುಕ್ತವಾಯಿತೆಂದು ಅವರ ಅಭಿಪ್ರಾಯವಾಗಿದೆ.
ಅದೇನೆ ಇರಲಿ ಕೊರೋನಾ ಸೋಂಕು ಹರಡದಂತೆ ಹಮ್ಮಿಕೊಳ್ಳಬೇಕಾಗಿರುವ, ಅರೋಗ್ಯ ಇಲಾಖೆ ಸೂಚಿಸಿರುವ ನಿಯಮಗಳನ್ನು ಈ ಸಂದಭ೯ದಲ್ಲಿ ಎಲ್ಲರೂ ಪಾಲಿಸಿದ್ದು  ವಿಷೇಶವಾಗಿತ್ತು.
ಲೋಕ ಕಲ್ಯಾಣಕ್ಕಾಗಿ ಶ್ರೀಕೊರೋನಮ್ಮಳನ್ನು ಉಡಿತುಂಬಿ ಕಳುಹಿಸಿಕೊಡುವ  ವಿಶಿಷ್ಟವಾದ  ಸಾಂಪ್ರದಾಯದ ಆಚರಣೆಯನ್ನು,ಆಚರಿಸುವ ಮೂಲಕ ವಿಶ್ವಕುಟುಂಬ ಮನೋಧಮ೯ ತೋರಿದ ಎಂ.ಬಿ.ಅಯ್ಯನಹಳ್ಳಿಯ ಸಮಸ್ಥ ಗ್ರಾಮಸ್ಥರಿಗೆ ವಂದೇ ಮಾತರಂ ಜಾಗೃತಿ ವೇದಿಕೆ  ಧನ್ಯವಾದಗಳನ್ನು ಸಲ್ಲಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button