ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: NEET-PG ಪರೀಕ್ಷೆಯನ್ನು 2023ರ ಮಾರ್ಚ್ 5 ರಿಂದ ಮೇ 21, 2023 ಕ್ಕೆ ಮುಂದೂಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಸಂದೇಶಕ್ಕೆ ಆರೋಗ್ಯ ಸಚಿವಾಲಯ ಪ್ರತಿಕ್ರಿಯಿಸಿದೆ.
ಈ ಸುದ್ದಿಯನ್ನು ನಿರಾಕರಿಸಿರುವ ಆರೋಗ್ಯ ಸಚಿವಾಲಯ ಇದೊಂದು ಸುಳ್ಳುಸುದ್ದಿ ಎಂದು ಸ್ಪಷ್ಟೀಕರಿಸಿದೆ.
“ಜಾಲತಾಣಗಳಲ್ಲಿ ಹರಡಿದ ಸಂದೇಶ ನಕಲಿಯಾಗಿದೆ… ಜಾಗರೂಕರಾಗಿರಿ… ಇಂತಹ ನಕಲಿ ಸಂದೇಶಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ” ಎಂದು ಸಚಿವಾಲಯ ಮಂಗಳವಾರ ಟ್ವೀಟ್ ಮಾಡಿದೆ.
ಮಾರ್ಚ್ 25 ರವರೆಗೆ ಆನ್ಲೈನ್ ಅಪ್ಲಿಕೇಶನ್ ಮುಂದುವರಿಯುತ್ತದೆ ಎಂದು ನಕಲಿ ಸಂದೇಶದಲ್ಲಿ ಹೇಳಲಾಗಿತ್ತು. ಇದರಿಂದ ಸಕಾಲಕ್ಕೆ ಫಾರ್ಮ್ ತುಂಬದ ಅನೇಕ ಅಭ್ಯರ್ಥಿಗಳು ಖುಷ್ ಆಗಿದ್ದರೆ ಈಗಾಗಲೇ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿದ ಅಭ್ಯರ್ಥಿಗಳು ನಿರಾಶರಾಗಿದ್ದರು.
ಇದೀಗ ಆರೋಗ್ಯ ಸಚಿವಾಲಯವೇ ಈ ಕುಚೋದ್ಯದ ಸುದ್ದಿಗೆ ಅಂತ್ಯ ಹಾಡಿದೆ.
ಮಹಾ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ರಾಜೀನಾಮೆ
https://pragati.taskdun.com/maharashtra-congress-legislative-party-leader-balasaheb-thorat-resigned/
ಲೇಹ್- ಲಡಾಖ್ ಬೇಸಿಗೆ ಪ್ರವಾಸಕ್ಕೆ IRCTC ಹೊಸ ಪ್ಯಾಕೇಜ್
https://pragati.taskdun.com/irctc-new-package-for-leh-ladakh-summer-tour/
*ಬಸ್ ನಿಂದ ಬಿದ್ದು, ಚಕ್ರದಡಿ ಸಿಲುಕಿ ಸಾವನ್ನಪ್ಪಿದ ವಿದ್ಯಾರ್ಥಿ*
https://pragati.taskdun.com/busaccidentstudentdeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ