ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇರುವುದನ್ನು ನಾನು ಒಪ್ಪುತ್ತೇನೆ. ಆದರೆ 17 ಶಾಸಕರು ಹೊರಗಿನಿಂದ ಬಂದಿದ್ದಕ್ಕೆ ಗೊಂದಲ ಸೃಷ್ಟಿ ಎಂದು ನಾನು ಹೇಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಗೊಂದಲವಿರುವುದು ನಿಜ. ಆದರೆ 17 ಶಾಸಕರು ಬಂದಿದ್ದಕ್ಕೆ ಗೊಂದಲ ಎಂದು ಹೇಳಿಲ್ಲ. ನಮಗೆ ಪೂರ್ಣ ಬಹುಮತ ಇದ್ದಿದ್ದರೆ ಗೊಂದಲ ಇರುತ್ತಿರಲಿಲ್ಲ ಎಂದು ಹೇಳಿದ್ದೇನೆ ಎಂದರು.
ಅವರು ಪಕ್ಷಕ್ಕೆ ಬಂದಿದ್ದಕ್ಕೆ ಸರ್ಕಾರ ರಚನೆಯಾಗಿದೆ. ಅವರ ಋಣ ನಮ್ಮಮೇಲಿದೆ. ಕೆಲವರು ಸಿಎಂ ಬದಲಾಗಬೇಕು ಎಂದು ಪ್ರಸ್ತಾಪ ಮಾಡಿದ್ದಾರೆ. ಇನ್ನೂ ಕೆಲವರು ಬಿಎಸ್ ವೈ ಅವರು ಮುಂದುವರೆಯಬೇಕು ಎಂದು ಹೇಳುತ್ತಿದ್ದಾರೆ. ಕೆಲವರು ದೆಹಲಿಗೂ ಹೋಗಿ ಬಂದಿದ್ದಾರೆ ಗೊಂದವಿದೆ ಎಂಬುದನ್ನು ನಾನೂ ಒಪ್ಪುತ್ತೇನೆ. ಶಾಸಕ ಯತ್ನಾಳ್ ಬಹಿರಂಗ ಹೇಳಿಕೆ ನೀಡಿದಾಗ ಅವರ ಜೊತೆ ಚರ್ಚಿಸಿ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಸೂಚಿಸಿದ್ದೆ. ಯೋಗೇಶ್ವರ್, ರೇಣುಕಾಚಾರ್ಯ ಜೊತೆಗೂ ಚರ್ಚಿಸಿ ಸೂಚಿಸಿದ್ದೆ ಎಂದು ಹೇಳಿದರು.
ಈಶ್ವರಪ್ಪ ನಿನ್ನೆ ಏನು ಹೇಳಿದ್ದರು? – ಇಲ್ಲಿದೆ ನೋಡಿ –
17 ಜನ ಬಂದ ನಂತರ ಬಿಜೆಪಿಯಲ್ಲಿ ಗೊಂದಲ: ಈಶ್ವರಪ್ಪ ಬಹಿರಂಗ ಹೇಳಿಕೆ (ವಿಡಿಯೋ ಸಹಿತ)
’ಕಾವೇರಿ’ ಯಲ್ಲಿ ಗರಿಗೆದರಿದ ರಾಜಕೀಯ; ಸಚಿವರು, ಶಾಸಕರಿಂದ ಸಿಎಂ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ