Belagavi NewsBelgaum NewsElection NewsKannada NewsPolitics

*ಡಿಸಿಸಿ ಬ್ಯಾಂಕ್ ಚುನಾವಣೆ: ಮೂರೇ ಕ್ಷೇತ್ರಗಳ ಫಲಿತಾಂಶ ಮಾತ್ರ ಪ್ರಕಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ನ 7 ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂರು ತಾಲೂಕುಗಳ ಫಲಿತಾಂಶ ಮಾತ್ರ ಪ್ರಕಟವಾಗಿದ್ದು, ಉಳಿದ ನಾಲ್ಕು ತಾಲೂಕಿನ ಫಲಿತಾಂಶ ಹೈಕೋರ್ಟ್ ಆದೇಶ ಹಿನ್ನೆಲೆ  ಕಾಯ್ದಿರಿಸಲಾಗಿದೆ. 

ರಾಮದುರ್ಗ ತಾಲೂಕಿನಿಂದ ಮಲ್ಲಣ್ಣ ಯಾದವಾಡ, ಅಥಣಿ ತಾಲೂಕಿನಿಂದ ಲಕ್ಷ್ಮಣ ಸವದಿ, ರಾಯಬಾಗ ತಾಲೂಕಿನಿಂದ ಅಪ್ಪಾಸಾಹೇಬ್ ಕುಲಗೋಡೆ ಜಯ ಗಳಿಸಿದರು. 

ಇನ್ನೂ  ಕಿತ್ತೂರು, ಬೈಲಹೊಂಗಲ, ಹುಕ್ಕೇರಿ, ನಿಪ್ಪಾಣಿ ಕ್ಷೇತ್ರಗಳ ನಿರ್ದೇಶಕ ಸ್ಥಾನಕ್ಕೆ ಮತದಾನ ಮುಕ್ತಾಯಗೊಂಡರೂ ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ ಫಲಿತಾಂಶ ತಡೆ ಹಿಡಿಯಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button