Karnataka News

*ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಬೊಲೆರೊ: ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ : ದ್ವಿಚಕ್ರ ವಾಹನಗಳಿಗೆ ಬೊಲೆರೊ ಟೆಂಪೊ ಡಿಕ್ಕಿಯಾದ ಪರಿಣಾಮ, ದ್ವಿಚಕ್ರ ವಾಹನಗಳಲ್ಲಿ ಇದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲಾರದ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿಯಿಂದ ಗುಡಿಪಲ್ಲಿ ಕಡೆಗೆ ಹೋಗುವ ಮುಖ್ಯ ರಸ್ತೆಯ ಬಳಿ ನಡೆದಿದೆ.

ಈ ಅಪಘಾತದಲ್ಲಿ ಕೋನಂಗುಂಟೆ ಗ್ರಾಮದ ರಾಧಪ್ಪ(45), ವೆಂಕಟರಾಮಪ್ಪ (45) ಹಾಗೂ ವೆಂಕಟರಾಮಪ್ಪ ಪತ್ನಿ ಅಲುವೇಲಮ್ಮ(30) ಹಾಗೂ ಮತ್ತೋರ್ವ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Home add -Advt

ಒಟ್ಟು ಮೂರು ದ್ವಿಚಕ್ರ ವಾಹನಗಳಿಗೆ ಬೊಲೊರೊ ಡಿಕ್ಕಿ ಹೊಡೆದಿದ್ದು, ಮತ್ತೋರ್ವ ವ್ಯಕ್ತಿಗೆ ಗಂಬೀರ ಗಾಯಗಳಾಗಿದೆ. ಕೂಲಿ ಕೆಲಸ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ.

ಈ ಘಟನೆಗೆ ಬೊಲೊರೊ ವಾಹನ ಸವಾರನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗಿದ್ದು ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸದ್ಯದ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.

Related Articles

Back to top button