Election News

*ಬೂತ್ ನಂಬರ್ 146ರಲ್ಲಿ ಮರುಮತದಾನ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನವಣೆ ಹಿನ್ನೆಲೆಯಲ್ಲಿ ರಾಜ್ಯದ 14ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಏಪ್ರಿಲ್ 7ರಂದು ಉಳಿದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಮೊದಲ ಹಂತದ ಚುನವಣೆ ನಡೆದ ಒಂದು ಮತಗಟ್ಟೆಯಲ್ಲಿ ಮರುಮತದಾನ ಘೋಷಿಸಲಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮರುಮತದಾನ ನಡೆಯಲಿದೆ. ಏಪ್ರಿಲ್ 29ರಂದು ಸೋಮವಾರ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಬೂತ್ ನಂಬರ್ 146ರಲ್ಲಿ ಮರುಮತದಾನ ನಡೆಯಲಿದೆ.

ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 26ರಂದು ನಡೆದ ಮತದಾನದ ವೇಳೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಹನೂರು ತಾಲೂಕಿನ 5 ಗ್ರಾಮದವರು ಮತದಾನ ಬಹಿಷ್ಕರಿಸಿ ಗಲಾಟೆ ಮಾಡಿದ್ದರು. ಮತಗಟ್ಟೆಗೆ ನುಗ್ಗಿ ಇವಿಎಂ, ಕುರ್ಚಿ, ಮೇಜು ಸೇರಿದಂತೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಮರುಮತದಾನ ನಡೆಯಲಿದೆ.


Related Articles

Back to top button