Belagavi NewsBelgaum NewsPolitics

*ಜನರ ಕಿಸೆಗೆ ಕತ್ತರಿ ಹಾಕುವ ಕಾಂಗ್ರೆಸ್ ಸರಕಾರ: ಮಾಳವಿಕಾ ಅವಿನಾಶ್ ಕಿಡಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ಪಕ್ಷದ ಪ್ರಚಾರಕ್ಕೆ ಬಳಸುವ ಆಡಿಯೋ- ವಿಡಿಯೋಗಳನ್ನು ಬೆಳಗಾವಿಯಲ್ಲಿ ಇಂದು ಬಿಡುಗಡೆ ಮಾಡಿದರು. ಇನ್ನು ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಇದನ್ನು ಬಳಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.


ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, 17 ಕೋಟಿ ಕಾರ್ಯಕರ್ತರಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯವರನ್ನಾಗಿ ಮಾಡಲು ನಮ್ಮ 1.5 ಕೋಟಿ ಕಾರ್ಯಕರ್ತರು ಕಾರ್ಯ ನಿರತರಾಗಿದ್ದಾರೆ ಎಂದು ಅವರು ವಿವರಿಸಿದರು.


ಕಾಂಗ್ರೆಸ್ ಸರಕಾರವು ಜನರ ಜೋಬಿಗೆ ಕತ್ತರಿ ಹಾಕಿ ಅವರು ಕೊಟ್ಟ ಅಸಮರ್ಪಕ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದರು. ಇದೇವೇಳೆ ಅವರು ಹಾಡುಗಳನ್ನು ಕೇಳಿಸಿದರು. ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಪ್ರಮುಖರಾದ ಎಂ.ಬಿ.ಝಿರ್ಲಿ, ಗಿರೀಶ್ ಉಪ್ಪಾರ, ಶರತ್ ಹೆಗ್ಡೆ, ಹನುಮಂತ ಕೊಂಗಾಳೆ ಇತರರು ಇದ್ದರು.

Related Articles

Back to top button