Kannada NewsKarnataka NewsLatest

*ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಊಟ ಕೊಟ್ಟಿಲ್ಲ ಎಂದು ಮಗನೊಬ್ಬ ತಾಯಿಯನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರದ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ.

ನೇತ್ರಾ (40) ಮೃತ ಮಹಿಳೆ. ಯುವಕ ಮುಳಬಾಗಿಲಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ಹೊರಡಲು ಸಿದ್ಧನಾಗಿದ್ದ ಯುವಕ ತನಗೆ ಊಟ ಬಡಿಸುವಂತೆ ತಾಯಿಗೆ ಹೇಳಿದ್ದಾನೆ. ಆಗ ನೇತ್ರಾ, ನೀನು ನನ್ನ ಮಗ ಅಲ್ಲ, ನಾನು ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಾಳೆ. ಕೋಪಗೊಂಡ ಮಗ ತಾಯಿಯ ತಲೆಗೆ ರಾಡ್ ನಿಂದ ಹೊಡೆದಿದ್ದಾನೆ.

Home add -Advt

ಗಂಭೀರವಾಗಿ ಗಾಯಗೊಂಡ ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಯುವಕ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button