Latest

ಕೇಂದ್ರ ಬಜೆಟ್-2021-22 ಪ್ರಮುಖಾಂಶಗಳು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.

ಬಜೆಟ್ ಪ್ರಮುಖಾಂಶಗಳು:
* ಸ್ವಚ್ಛ ಭಾರತ್ ಮತ್ತು ಸ್ವಸ್ಥ ಭಾರತ್ ಗೆ ಆದ್ಯತೆ
* ನಗರಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ 2 ಲಕ್ಷ 80 ಸಾವಿರ ಕೋಟಿ ಘೋಷಣೆ
* ಸ್ವಚ್ಛ ನಗರಗಳಿಗಾಗಿ 141,678 ಕೋಟಿ ಮುಂದಿನ 5 ವರ್ಷಗಳಲ್ಲಿ ಖರ್ಚು ಮಾಡಲು ನಿರ್ಧಾರ
* ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ವೈಯಕ್ತಿಕ ವಾಹನಗಳಿಗೆ 20 ವರ್ಷ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷ ಬಳಕೆ ಮಿತಿ
* ಆರೋಗ್ಯಕ್ಕಾಗಿ 2,23,846 ಕೋಟಿ ಖರ್ಚು ಮಾಡಲು ನಿರ್ಧಾರ
* ಆರೋಗ್ಯ ಕ್ಷೇರದ ಮೂಲಸೌಕರ್ಯಕ್ಕೆ 64,184 ಕೋಟಿ ಅನುದಾನ

* ಲೇಹ್ ನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಸ್ಥಾಪಿಸಲು ನಿರ್ಧಾರ, 750 ಶಾಲೆಗಳನ್ನು ಬುಡುಕಟ್ಟು ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
* ಕೋವಿಡ್ ವ್ಯಾಕ್ಸಿನ್ ಗೆ 35 ಸಾವಿರ ಕೋಟಿ ಘೋಷಣೆ
* ಜಲಜೀವನ ಮಿಷನ್ 2.87 ಲಕ್ಷ ಕೋಟಿ
* ಅರ್ಬನ್ ಕ್ಲೀನ್ ಇಂಡಿಯಾ ಮಿಷನ್ 1.41 ಲಕ್ಷ ಕೋಟಿ
* ಮಿಷನ್ ಪೋಷಣ್ 2.0 ಘೋಷಣೆ
* ಉತ್ತಮ ಗುಣಮಟ್ಟದ ಬಟ್ಟೆ ಉತ್ಪಾದನೆಗಾಗಿ 7 ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪನೆ
* 1.03 ಲಕ್ಷ ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ತಮಿಳುನಾಡಿನಲ್ಲಿ ನಡೆಯಲಿದ್ದು ಇದರಲ್ಲಿ ಮಧುರೈ-ಕೊಲ್ಲಂ, ಚಿತ್ತೂರು-ಕೊಚ್ಚೂರು ಕಾರಿಡಾರ್ ಯೋಜನೆ ಸೇರಿದೆ
* ದೇಶದಲ್ಲಿ 11 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ.

* 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಕೇವಲ ಪಿಂಚಣಿ ಮತ್ತು ಬಡ್ಡಿಯ ಮೇಲೆ ಜೀವನ ಸಾಗಿಸುತ್ತಿದ್ದರೆ ಇನ್ಮುಂದೆ ಐಟಿ ರಿಟರ್ನ್ ಇಲ್ಲ
* ಬೆಂಗಳೂರು ಮೆಟ್ರೋ ಯೋಜನೆಗೆ 14 ಸಾವಿರ ಕೋಟಿ ಅನುದಾನ
* ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯಿ
* ಬೇಳೆಕಾಳುಗಳ ಖರೀದಿಗೆಂದೇ 10,530 ಕೋಟಿ ರೂಪಾಯಿ ಮೀಸಲು
* ಗೋದಿ ಖರೀದಿಗಾಗಿಯೇ 33,000 ಕೋಟಿ ರೂ. ಮೀಸಲು
* ದೇಶದಲ್ಲಿ 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ
* ಈ ವರ್ಷ ಧಾನ್ಯಗಳ ಖರೀದಿ ಹಣ 1,72, 081 ಕೋಟಿ ರೂ.ಗೆ ಹೆಚ್ಚಳ
* ಪಶುಸಂಗೋಪನೆ ಮೀನುಗಾರಿಗೆಕೆ 40 ಸಾವಿರ ಕೋಟಿ
* ಕೃಷಿ ನೀರಾವರಿಗೆ ಹೆಚ್ಚುವರಿಗಾಗಿ ಹೆಚ್ಚುವರಿ 5 ಸಾವಿರ ಕೋಟಿ ರೂ.
* ಕೃಷಿ ಬೆಳೆಗಳಿಗೆ ವಿಮೆ ವಿಸ್ತರಣೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button