Latest

ನಾಪತ್ತೆಯಾಗಿದ್ದ ವೃದ್ಧ ಶವವಾಗಿ ಪತ್ತೆ; ಕಾಲ್ ಹಿಸ್ಟ್ರಿಯಲ್ಲಿ ಶಾಕಿಂಗ್ ವಿಚಾರ ಬಯಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ದಿನಗಳಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ವೃದ್ಧರೊಬ್ಬರು ಶವವಾಗಿ ಪತ್ತೆಯಾಗಿದ್ದು, ಮೃತದೇಹ ಚೀಲ ಹಾಗೂ ಬೆಡ್ ಶೀಟ್ ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ಜೆ.ಪಿ ನಗರದ 6ನೇ ಹಂತದ ಬಳಿ ಮೃತದೇಹವೊಂದು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಅದು ಎರಡು ದಿನಗಳಿಂದ ನಾಪತ್ತೆಯಾಗಿದ್ದ 67 ವರ್ಷದ ಬಾಲಸುಬ್ರಹ್ಮಣಿಯನ್ ಎಂದು ಗುರುತಿಸಲಾಗಿದೆ.

ನವೆಂಬರ್ 16ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ ಗೆ ಕರೆದೊಯ್ದಿದ್ದ ಬಾಲಸುಬ್ರಹ್ಮಣಿಯನ್ ಸಂಜೆ 4:55ರ ವೇಳೆಗೆ ಸೊಸೆಗೆ ಕರೆ ಮಾಡಿ ಹೊರಗಡೆ ಕೆಲಸ ಇದೆ ಎಂದು ಹೇಳಿದ್ದರು. ಬಳಿಕ ಎಷ್ಟೊತ್ತಾದರೂ ಮನೆಗೆ ಬಂದಿರಲಿಲ್ಲ. ಕರೆ ಮಾಡಿದರೆ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹಾಗಾಗಿ ಬಾಲಸುಬ್ರಹ್ಮಣ್ಯನ್ ಮಗ ಪುಟ್ಟೇನಹಳ್ಳಿ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.

ಇದೀಗ ವೃದ್ಧನ ಮೃತದೇಹ ಚೀಲ ಹಾಗೂ ಬೆಡ್ ಶೀಟ್ ಸುತ್ತಿದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ದೇಹದ ಮೇಲೆ ಯಾವುದೇ ಗುರುತುಗಳು ಇಲ್ಲ. ಸಿಡಿಆರ್ ಪರಿಶೀಲಿಸಿದಾಗ ಮೃತ ವೃದ್ಧನ ಕಾಲ್ ಹಿಸ್ಟರಿಯಲ್ಲಿ ನಿರಂತರವಾಗಿ ಮಹಿಳೆಯೊಬ್ಬಳ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸಾರಕ್ಕಿ ಸಿಗ್ನಲ್ ಬಳಿ ಕೊನೆ ಲೊಕೇಶನ್ ಪತ್ತೆಯಾಗಿದೆ. ಹೀಗಾಗಿ ಮಹಿಳೆ ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

JDS ಅಭ್ಯರ್ಥಿಗಳ ಪಟ್ಟಿ ಸಿದ್ಧ; ಆದ್ರೆ ಜ್ಯೋತಿಷಿ ‘ರೇವಣ್ಣ’ರಿಂದ ತಕರಾರು ಎಂದ HDK

https://pragati.taskdun.com/vidhanasabha-electionjds-candidate-listreadyh-d-kumaradwamyh-d-evanna/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button