World

*ದಾರ್ಮಿಕ ಹಾಡು ಹಾಡಿದಕ್ಕೆ ಭಾರತೀಯರ ಮೇಲೆ ಪಾಕ್ ಪ್ರಜೆ ಹಲ್ಲೆ: ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ: ದುಬೈನ ಬೇಕರಿಯೊಂದರಲ್ಲಿ ಧಾರ್ಮಿಕ ಹಾಡು ಹಾಡಿದಕ್ಕೆ ಭಾರತೀಯ ಮೂಲದ ಮೂವರ ಮೇಲೆ ಪಾಕಿಸ್ತಾನದ ಜೀಹಾದಿ ಭೀಕರ ದಾಳಿ ನಡೆಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಭಾರತದ ತೆಲಂಗಾಣ ಮೂಲದ ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಅಷ್ಟಪು ಪ್ರೇಮಸಾಗರ್ (35), ಶ್ರೀನಿವಾಸ್ ಎಂಬುವವರು ಕಳೆದ ಐದಾರು ವರ್ಷಗಳಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೇಕರಿಯಲ್ಲಿ ಧಾರ್ಮಿಕ ಹಾಡನ್ನು ಹಾಕಿದ್ದರು.

ಈ ವೇಳೆ ಬೇಕರಿಗೆ ಆಗಮಿಸಿದ ಪಾಕ್ ಮೂಲದ ಪ್ರಜೆಯೋರ್ವ ಏಕಾಏಕಿ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಪ್ರೇಮ್ ಸಾಗರ ಹಾಗೂ ಶ್ರೀನಿವಾಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಾಗರ್ ಎಂಬಾತ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಇಬ್ಬರ ಯುವಕರ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ಸಹಾಯ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಬಳಿ ಮಾತನಾಡಲಾಗಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button