Latest
ಈ ಮುದ್ದು ಬಾಲಕಿ ನಿಮಗೆ ಗೊತ್ತಾ?
5 ವರ್ಷದ ಬಾಲಕಿ ಬಿಟ್ಟುಹೋದ ಪಾಲಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 5 ವರ್ಷದ ರುಕ್ಸಾನಾ ಎನ್ನುವ ಬಾಲಕಿಯನ್ನು ತಂದೆ-ತಾಯಿ ನವ್ಹೆಂಬರ್ 3 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹುಬ್ಬಳಿಯ ಕೆ.ಕೆ.ನಗರದ 2 ನೇ ಕ್ರಾಸ್ (ಕರ್ಕಿ ಬಸವೇಶ್ವರ ಗುಡಿಯ ಹತ್ತಿರ ಸಾಬಣ್ಣ ಕಿಣಕೇರಿ ಇವರ ಮನೆ) ಬಳಿ ಬಿಟ್ಟು ಹೋಗಿದ್ದಾರೆ.
ಬಾಲಕಿಯನ್ನು ಸಾಬಣ್ಣ ಕಿಣಕೇರಿ ಇವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಧಾರವಾಡ ಇವರ ಮುಂದೆ ಹಾಜರುಪಡಿಸಿದ್ದು, ಸಮಿತಿಯವರು ಬಾಲಕಿಯನ್ನು ವಿಚಾರಿಸಿದಾಗ ಮಗು ನಾನು ಬೆಳಗಾವಿ ಜಿಲ್ಲೆಯವಳೆಂದು ಹೇಳಿಕೆ ನೀಡಿದ್ದಾಳೆ
ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಠಡಿ ಸಂಖ್ಯೆ: ೨೦೪, ೨ನೇ ಮಹಡಿ, ಸುವರ್ಣ ವಿಧಾನಸೌಧ, ಬೆಳಗಾವಿ ದೂ: ೦೮೩೧-೨೪೭೪೧೧೧ ಕ್ಕೆ ಸಂಪರ್ಕಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ಎಸ್. ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಮಗುವಿನ ಪಾಲಕರ ಪತ್ತೆಗಾಗಿ ಈ ಸುದ್ದಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ)




