Latest

*ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಕರಾಳ ಮುಖವನ್ನು ನೋಡಿದೆ. ಆತಂಕವಾದಿಗಳ ರಕ್ಷಣೆಗೆ ಕಾಂಗ್ರೆಸ್ ಬೀದಿಗೆ ಇಳಿಯುತ್ತಿದೆ. ಇದರಿಂದ ಶಾಂತಿ ನೆಲೆಸುವುದಿಲ್ಲ, ಅಶಾಂತಿ ಸೃಷ್ಟಿಯಾಗುತ್ತದೆ. ಕಾಂಗ್ರೆಸ್ ರಿವರ್ಸ್ ಗೇರ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾದಿದ ಪ್ರಧಾನಿ ಮೋದಿ, ಕಾಂಗ್ರೆಸ್ ನವರು ಮತ ಕೇಳುತ್ತಿರುವುದು ಅವರ ಒಬ್ಬ ನಾಯಕ ನಿವೃತ್ತಿಯಾಗುತ್ತಿದ್ದಾನೆ ಎಂದು. ನಿವೃತ್ತಿ ಹೆಸರಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಬಿಜೆಪಿ ಯೋಜನೆಗಳನ್ನು ನಾಶ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ರಾಷ್ಟ್ರ ವಿರೋಧಿಗಳ ಮೇಲೆ ಹಾಕಲಾದ ಕೇಸ್ ಗಳನ್ನು ಕಾಂಗ್ರೆಸ್ ಸರ್ಕಾರದಲ್ಲಿ ಹಿಂಪಡೆಯಲಾಯಿತು. ಇಡೀ ದೇಶವೇ ಸೈನಿಕರನ್ನು ಗೌರವಿಸುತ್ತದೆ. ಆದರೆ ಕಾಂಗ್ರೆಸ್ ಹಾಗಲ್ಲ, ನಮ್ಮ ಸೈನಿಕರನ್ನೇ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

Related Articles

ಅಭಿವೃದ್ಧಿ ಶೂನ್ಯವಾದ ಕಾಂಗ್ರೆಸ್, ಆತಂಕವಾದಿಗಳ ರಕ್ಷಣೆ ಮಾಡುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆ? ಜೆಡಿಎಸ್ ಕೂಡ ಕಚ್ಚೆ-ಪಂಚೆ ಪಕ್ಷ ಯಾವುದೇ ಅಭಿವೃದ್ಧಿ ಮಾಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕರಕ್ಕೆ ಬಂದ ಮೇಲೆ ಇಡೀ ವಿಶ್ವದಲ್ಲಿಯೇ ಭಾರತದ ಕೀರ್ತಿ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕರ್ನಾಟಕದ ಪರ ಜೈಕಾರ ಮೊಳಗಬೇಕಿದೆ. ಬಿಜೆಪಿ ಯುವಕರ ಭವಿಷ್ಯವನ್ನು ರೂಪಿಸುವಲ್ಲಿ ಸಾಕಷ್ಟು ಶ್ರಮಿಸಿದೆ. ಹಲವು ಯೋಜನೆ ಜಾರಿಗೊಳಿಸಿದೆ. ಯುವ ಸ್ಟಾರ್ಟಪ್ ಗಳಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದೇವೆ. ದೇಶದಲ್ಲಿ 10 ಸಾವಿರ ಅಟಲ್ ಟಿಂಕರಿಂಗ್ ಸಂಶೋಧನಾ ಸಂಸ್ಥೆಗಳಿವೆ. ಇದರಿಂದ ಯುವಕರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ರಕ್ಷಣೆ ಆಗಲಿಲ್ಲ, ರಾಣಿ ಅಬ್ಬಕನ ರೀತಿ ನಮ್ಮ ಮಹಿಳೆಯರಲ್ಲಿಯೂ ಸಾಮರ್ಥ್ಯವಿದೆ. ಮುದ್ರಾ ಯೋಜನೆ ಮಹಿಳೆಯರಿಗೆ ಸಹಾಯಕವಾಗಿದೆ. ಪಿ ಎಂ ಕಿಸಾನ್ ಯೋಜನೆಯ ಹೆಚ್ಚಿನ ಹಣ ಮಹಿಳಾ ರೈತರಿಗೆ ಸಿಕ್ಕಿದೆ. ಅಭಿವೃದ್ಧಿ ಬಯಸುವವರು ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.

Home add -Advt
https://pragati.taskdun.com/b-s-yedyurappasiddaraaiahv-somannavaruna/


Related Articles

Back to top button