Belagavi NewsBelgaum NewsKannada NewsKarnataka News

*ಭಾರಿ ಮಳೆಗೆ ಸಮಸ್ಯೆ: ಸ್ವತಃ ಫೀಲ್ಡ್ ಗೆ ಇಳಿದ ಪಾಲಿಕೆ ಆಯುಕ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಹಾಳಾಗಿವೆ.‌ ಚರಂಡಿಗಳು ಬ್ಲಾಕ್ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ತಿಳಿಯಲು ಸ್ವತಃ ಪಾಲಿಕೆ ಆಯುಕ್ತರೆ ಫೀಲ್ಡಿಗೆ ಇಳಿದಿದ್ದಾರೆ.‌

Home add -Advt

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ರವಿವಾರ ಪೇಟೆ, ಎನ್.ಡಿ.ಕೂಟ್, ಗಣಪತ್ ಗಲ್ಲಿ, ಪಾಂಗುಳ ಗಲ್ಲಿ ಹಾಗೂ ಫೋರ್ಟ್ ರೋಡ್ ಪ್ರದೇಶಗಳಲ್ಲಿ ಹಾನಿಯಾಗಿರುವ ವ್ಯಾಪಾರಿಗಳಿಗೆ ಹಾಗೂ ಚರಂಡಿ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸುವದಾಗಿ ಆಶ್ವಾಸನೆ ನೀಡಿದ್ದಾರೆ. ಇನ್ನು, ಮಳೆಗಾಲದಲ್ಲಿ ನಗರದಲ್ಲಿ ಕಸ ನಿರ್ವಹಣೆ ಕೂಡಾ ಸರಿಯಾಗಿ ಆಗುತ್ತಿಲ್ಲ.‌ ಆ ನಿಟ್ಟಿನಲ್ಲಿ ಕೂಡಾ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.‌

Related Articles

Back to top button